
ಡಬಲ್ ಡೆಕರ್ ಬಸ್ ಮುಂದೆ ಚಲಿಸುತ್ತಿದ್ದ ಹಾಲಿನ ಟ್ಯಾಂಕರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅಪಘಾತದ ತೀವ್ರತೆಗೆ ಪ್ರಯಾಣಿಕರ ದೇಹಗಳು ಹಾರಿಹೋಗಿದ್ದವು. ಬೆಳಗಿನ ಸುಖ ನಿದ್ರೆಯಲ್ಲಿದ್ದ ಹಲವರು ಕಣ್ಮುಚ್ಚಿ ಬಿಡುವಷ್ಟರಲ್ಲಿಯೇ ಸಾವಿನ ಮನೆ ಸೇರಿದ್ದರು. ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿದ್ದು, ಇದೀಗ ಬಿಡುಗಡೆಗೊಂಡಿರುವ ವಿಡಿಯೋಗಳು ಅಪಘಾತದ ತೀವ್ರತೆಯನ್ನು ಸಾರುತ್ತಿವೆ.