ಇನ್ನೂ ‘ಗೃಹಲಕ್ಷ್ಮಿ’ ಹಣ ಬರಲಿಲ್ಲ ಎಂದು ಚಿಂತಿಸ್ಬೇಡಿ, ಈ ದಿನಾಂಕದಂದು ಒಟ್ಟಿಗೆ ಜಮಾ ಆಗುತ್ತೆ 4 ಸಾವಿರ..!

‘ಗೃಹಲಕ್ಷ್ಮಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದುವರೆಗೆ ಬರೋಬ್ಬರಿ 1.14 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 8 ರಿಂದ 9 ಲಕ್ಷ ಫಲಾನುಭವಿಗಳಿಗೆ ಇನ್ನೂ ಹಣ ಸಿಕ್ಕಿಲ್ಲ.

ಛೇ…ನಮಗೆ ಇನ್ನೂ ‘ಗೃಹಲಕ್ಷ್ಮಿ’ ಹಣ ಬರಲಿಲ್ಲ ಎಂದು ಮಹಿಳೆಯರು ಚಿಂತಿಸುವ ಅಗತ್ಯವಿಲ್ಲ, ಇನ್ನು ಮುಂದೆ ಒಂದು ತಿಂಗಳು ಬಾಕಿ ಹಣ ಪೆಂಡಿಂಗ್ ಇದ್ದರೆ  ಒಂದೇ ಬಾರಿಗೆ ಬಾಕಿ ತಿಂಗಳು ಸೇರಿ 2 ತಿಂಗಳಹಣವನ್ನು ಪ್ರತಿ ತಿಂಗಳು 15 ನೇ ತಾರೀಕಿಗೆ ಗೃಹಲಕ್ಷ್ಮಿ ಹಣವನ್ನು ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ. ಪ್ರತಿ ದಿನವೂ ಕೂಡ ಹಣದ ವರ್ಗಾವಣೆಗೆ ಲಿಮಿಟ್ ಇರುವುದರಿಂದ ಮೊದಲನೇ ಕಂತಿನ ಹಣ ತಲುಪಿಸುವುದು ತಡವಾಗುತ್ತಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳು ಕೂಡ ಗೃಹಲಕ್ಷ್ಮಿ ಹಣವನ್ನು ಪಡೆಯಲಿದ್ದಾರೆ. ಹಾಗೆಯೇ ಮಹಿಳೆಯರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅಥವಾ ಆಧಾರ್ ಲಿಂಕ್ ಆಗಿದ್ದರು ಆ ಖಾತೆ ಆಕ್ಟಿವ್ ಆಗಿಲ್ಲ ಎಂದರೆ ಇದನ್ನು ಸರಿಪಡಿಸಿಕೊಳ್ಳಬೇಕು.

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನರಿಗೆ ಮಾಸಿಕ 2 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆಗಾಗಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಅವಧಿಗೆ 4600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 2023 -24 ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ 17500 ಕೋಟಿ ರೂ. ನಿಗದಿ ಮಾಡಲಾಗಿದ್ದು, ಮೊದಲ ಕಂತು 4375 ಕೋಟಿ ರೂ. ಬಿಡುಗಡೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆಗೆ ಸಂಬಂಧಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಷರತ್ತು ವಿಧಿಸಿ ಮೊದಲ ಕಂತಿನ ಅನುದಾನ 4,600 ಕೋಟಿ ರೂ. ಬಿಡುಗಡೆಗೆ ಆದೇಶಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read