ನಾನು ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದಿದ್ರು ಪರಿಣಿತಿ ಚೋಪ್ರಾ; ಹಳೆ ವಿಡಿಯೋ ವೈರಲ್

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ‌, ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರೊಂದಿಗೆ ಈಗಾಗಲೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.

ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಇಬ್ಬರ ನಡುವೆ ಮದುವೆ ಸುದ್ದಿ ಹೆಚ್ಚಾಗಿ ಕೇಳಿಬರ್ತಿದೆ. ಈ ಮಧ್ಯೆ ಪರಿಣಿತಿ ಚೋಪ್ರಾ, ತಾವು ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದಿರುವ ಸಂದರ್ಶನದ ಹಳೆಯ ವಿಡಿಯೋ ವೊಂದು ವೈರಲ್ ಆಗ್ತಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗಿನ ಚಲನಚಿತ್ರವನ್ನು ಪ್ರಚಾರ ಮಾಡುವಾಗ, ಪರಿಣಿತಾ ಚೋಪ್ರಾಗೆ ಅವರು ಮದುವೆಯಾಗಲಿರುವ ಸೆಲೆಬ್ರಿಟಿಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ಹಾಲಿವುಡ್ ನಟರನ್ನು ಪ್ರಸ್ತಾಪಿಸಿದ ನಂತರ ರಾಜಕಾರಣಿಗಳ ಬಗ್ಗೆ ಕೇಳಲಾಗುತ್ತದೆ. ಅದಕ್ಕೆ “ಸಮಸ್ಯೆಯೆಂದರೆ ನಾನು ಯಾವುದೇ ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವಾರು ಉತ್ತಮ ಆಯ್ಕೆಗಳಿವೆ. ಆದರೆ ನಾನು ಯಾವುದೇ ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ” ಎಂದಿದ್ದಾರೆ.

ಆದರ್ಶ ಸಂಗಾತಿಗಾಗಿ ತಾನು ಹುಡುಕುತ್ತಿರುವುದನ್ನು ಸಹ ಪರಿಣಿತಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗ್ತಿದ್ದು ಗಮನ ಸೆಳೆದಿದೆ.

https://twitter.com/iFaridoon/status/1642446811603562497?ref_src=twsrc%5Etfw%7Ctwcamp%5Etweetembed%7Ctwterm%5E1642446811603562497%7Ctwg

https://twitter.com/MP_SanjeevArora/status/1640598560457764864?ref_src=twsrc%5Etfw%7Ctwcamp%5Etweetembed%7Ctwterm%5E1

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read