alex Certify ಬೆಳಗಿನ ಉಪಹಾರವನ್ನು ತಡವಾಗಿ ಮಾಡಬೇಡಿ; ನಿಮಗೆ ಗೊತ್ತಿರಲಿ ಈ ಗೋಲ್ಡನ್‌ ರೂಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗಿನ ಉಪಹಾರವನ್ನು ತಡವಾಗಿ ಮಾಡಬೇಡಿ; ನಿಮಗೆ ಗೊತ್ತಿರಲಿ ಈ ಗೋಲ್ಡನ್‌ ರೂಲ್‌

ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ. ಇದು ನಮಗೆ ಇಡೀ ದಿನ ಶಕ್ತಿಯನ್ನು ನೀಡುತ್ತದೆ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಶೇ.90ರಷ್ಟು ಜನರು ಸರಿಯಾದ ಸಮಯಕ್ಕೆ ಉಪಹಾರ ಸೇವಿಸುವುದಿಲ್ಲ.

ಕೆಲಸಕ್ಕೆ ಹೊರಡುವ ಆತುರ ಅಥವಾ ಮಕ್ಕಳನ್ನು ಶಾಲೆಗೆ ಕಳುಹಿಸುವ ಗಡಿಬಿಡಿಯಲ್ಲಿ ಕೆಲವರು ಬೆಳಗಿನ ಉಪಹಾರವನ್ನೇ ಸ್ಕಿಪ್‌ ಮಾಡುತ್ತಾರೆ. ಇನ್ನು ಕೆಲವರು ತುಂಬಾ ತಡವಾಗಿ ಸೇವಿಸುತ್ತಾರೆ. ಆದರೆ ತಡವಾಗಿ ಉಪಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಬೆಳಗಿನ ಉಪಾಹಾರಕ್ಕೆ ಸರಿಯಾದ ಸಮಯ ಯಾವುದು? ತಡವಾಗಿ ಸೇವಿಸುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ತಿಳಿಯೋಣ.

ತಜ್ಞರ ಪ್ರಕಾರ ಬೆಳಗ್ಗೆ ನಿದ್ದೆಯಿಂದ ಎದ್ದು 2 ಗಂಟೆಯೊಳಗೆ ಉಪಹಾರ ಸೇವಿಸಬೇಕು. ಈ ಸಮಯದಲ್ಲಿ ರಾತ್ರಿಯ ಉಪವಾಸದ ನಂತರ ದೇಹವು ಗ್ಲೂಕೋಸ್ ಕೊರತೆಯನ್ನು ಅನುಭವಿಸುತ್ತದೆ. ಪೋಷಕಾಂಶಗಳಿಂದ ಕೂಡಿದ ಉಪಹಾರವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ದಿನವಿಡೀ ಸಕ್ರಿಯವಾಗಿರಬಹುದು.

ಶಕ್ತಿಯ ಕೊರತೆ: ತಡವಾಗಿ ಉಪಹಾರ ಸೇವಿಸುವುದರಿಂದ ದೇಹವು ಶಕ್ತಿಯ ಕೊರತೆಯನ್ನು ಅನುಭವಿಸಬಹುದು. ಇದು ದಣಿವು ಮತ್ತು ಆಲಸ್ಯವನ್ನುಂಟುಮಾಡುತ್ತದೆ. ಕೆಲಸ ಮತ್ತು ವ್ಯಾಯಾಮದ ಮೇಲೆ ಕೂಡ ಇದರ ಪ್ರಭಾವ ಉಂಟಾಗಬಹುದು.

ರಕ್ತದಲ್ಲಿನ ಸಕ್ಕರೆಯ ಅಸಮತೋಲನ: ಬೆಳಗಿನ ಉಪಾಹಾರವನ್ನು ತಡವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಬಹುದು. ಇದ್ದಕ್ಕಿದ್ದಂತೆ ಹಸಿವು ಕಾಡಬಹುದು. ಇದರಿಂದ ತೂಕ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಅನಾರೋಗ್ಯಕರ ವಸ್ತುಗಳನ್ನು ತಿನ್ನಲು ಪ್ರಚೋದನೆಗೊಳಗಾಗುವ ಸಾಧ್ಯತೆ ಇರುತ್ತದೆ.

ಬೊಜ್ಜು : ತಡವಾಗಿ ಬೆಳಗಿನ ಉಪಾಹಾರ ಸೇವಿಸುವವರಲ್ಲಿ ಸ್ಥೂಲಕಾಯತೆ ಹೆಚ್ಚಾಗುವ ಅಪಾಯವಿದೆ. ತಡವಾಗಿ ಉಪಹಾರ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು, ಇದು ಕೊಬ್ಬನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

ಮಧುಮೇಹದ ಅಪಾಯ: ತಡವಾಗಿ ಉಪಾಹಾರ ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ. ದೇಹವು ನಿರಂತರವಾಗಿ ಶಕ್ತಿಯ ಕೊರತೆಯನ್ನು ಅನುಭವಿಸುತ್ತದೆ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚುತ್ತಲೇ ಇರುತ್ತದೆ.

ಬೆಳಗಿನ ಉಪಹಾರಕ್ಕೆ ಹಣ್ಣು, ದಲಿಯಾ, ಮೊಟ್ಟೆಗಳು, ಓಟ್ಸ್,  ಧಾನ್ಯದ ಬ್ರೆಡ್‌ನೊಂದಿಗೆ ದ್ವಿದಳ ಧಾನ್ಯಗಳು ಅಥವಾ ತರಕಾರಿಗಳನ್ನು ಸೇವಿಸಬಹುದು. ಮೊಸರು ಸೇವನೆ ಕೂಡ ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...