ಕೋಪ ಮನುಷ್ಯ ಸಹಜ ಗುಣ. ಆದರೆ ಸಿಟ್ಟು ಅತಿಯಾದರೆ ಅನಾಹುತಕ್ಕೆ ಕಾರಣವಾಗಬಹುದು. ಅನೇಕ ಬಾರಿ ಕೋಪ ಸಂಬಂಧವನ್ನೂ ಕೆಡಿಸುತ್ತದೆ. ಹೆಂಡತಿ ಕೋಪಿಷ್ಠೆಯಾದ್ರೆ ಗಂಡನಿಗೆ ಅದೇ ಕಿರಿಕಿರಿ. ಆದ್ರೆ ಪತ್ನಿಯ ಸಿಟ್ಟಿನಿಂದಲೂ ಪತಿಗೆ ಕೆಲವೊಂದು ಲಾಭಗಳಿವೆ. ಇದೇ ಕೋಪದಲ್ಲಿ ಹೋರಾಡುವ ಇಚ್ಛೆ, ಬೆಂಬಲಿಸುವ ಧೈರ್ಯವೂ ಇರಬಹುದು.
ಹೆಂಡತಿ ಕೋಪಗೊಂಡರೆ ಅದು ಸಂಬಂಧದ ಮೇಲೆ ಉತ್ತಮ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೆಂಡತಿಯ ಕೋಪದ ಮೊದಲ ಪ್ರಯೋಜನವೆಂದರೆ ಅವಳು ಎಂದಿಗೂ ಸುಳ್ಳು ಹೇಳುವುದಿಲ್ಲ. ಸುಳ್ಳು ಹೇಳುವವರು ಮೆತ್ತಗೆ ಸಿಹಿಯಾಗಿ ಮಾತನಾಡುತ್ತಾರೆ. ಆದರೆ ಕೋಪಿಷ್ಠರು ಸದಾ ಸತ್ಯವನ್ನೇ ಹೇಳುತ್ತಾರೆ. ಅದೇ ರೀತಿ ಕೋಪಿಷ್ಠ ಹೆಂಡತಿ ಸುಳ್ಳನ್ನು ಸಹಿಸುವುದಿಲ್ಲ.
ಕೋಪಿಷ್ಠ ಪತ್ನಿಯ ಎರಡನೆಯ ಪ್ರಯೋಜನವೆಂದರೆ ಅವಳು ತನ್ನ ಗಂಡನನ್ನು ತುಂಬಾ ಪ್ರೀತಿಸುತ್ತಾಳೆ ಮತ್ತು ಜೀವನದಲ್ಲಿ ಎಂದಿಗೂ ಮೋಸ ಮಾಡುವುದಿಲ್ಲ. ಸತ್ಯವನ್ನು ಮಾತನಾಡುವ ಜನರು ಹೆಚ್ಚು ನಂಬಲರ್ಹರು. ಅದೇ ನಿಯಮ ಪತ್ನಿಗೂ ಅನ್ವಯಿಸುತ್ತದೆ. ಈ ರೀತಿಯ ಜನರ ಸಂಬಂಧಗಳು ಇತರರಿಗಿಂತ ಹೆಚ್ಚು ಕಾಲ ಉಳಿಯುತ್ತವೆ.
ಕೋಪಿಷ್ಠ ಹೆಂಡತಿ ತನ್ನನ್ನು ನೋಯಿಸಿದವರನ್ನು ದೂರವೇ ಇಡುತ್ತಾಳೆ. ಹಿಂತಿರುಗಿ ನೋಡುವುದಿಲ್ಲ. ಆಕೆಯನ್ನು ಸಂಬಂಧಗಳ ಕಡೆಗೆ ಸತ್ಯತೆಯ ಸಾಕಾರವೆಂದು ಪರಿಗಣಿಸಲಾಗುತ್ತದೆ.
ಕೋಪಗೊಂಡ ಹೆಂಡತಿ ಹೃದಯದಲ್ಲಿ ಪರಿಶುದ್ಧಳು. ಮನದಾಳದಲ್ಲಿರುವ ಮಾತುಗಳೇ ನಾಲಿಗೆಯ ಮೇಲೆ ಬರುತ್ತವೆ. ಇದೇ ಕಾರಣಕ್ಕೆ ಕೋಪವೂ ಜಾಸ್ತಿ. ಅಂಥವರಿಗೆ ಮನಸ್ಸಿನಲ್ಲಿ ಯಾವುದೇ ರೀತಿಯ ದ್ವೇಷ ಇರುವುದಿಲ್ಲ.
ವಿಪರೀತ ಸಿಟ್ಟು ಹೊಂದಿರುವ ಹೆಂಡತಿ ಆಡಿದ ಮಾತನ್ನು ಉಳಿಸಿಕೊಳ್ಳುತ್ತಾಳೆ. ಸವಾಲುಗಳನ್ನು ಪೂರ್ಣಗೊಳಿಸಲು ಇಷ್ಟಪಡುತ್ತಾಳೆ. ಅವಳು ತನ್ನ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುತ್ತಾಳೆ.