ಆದಿಯಲ್ಲಿ ಪೂಜಿಪ ಗಣೇಶನ ಹಬ್ಬ ಹತ್ತಿರ ಬರ್ತಿದೆ. ಗಣೇಶ ಚತುರ್ಥಿಗೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಭಾರತದಲ್ಲಿ ಗಣೇಶ ಚತುರ್ಥಿಗೆ ಹೆಚ್ಚಿನ ಮಹತ್ವವಿದೆ. ಸೆಪ್ಟೆಂಬರ್ 10ರಂದು ಗಣೇಶ ಚತುರ್ಥಿ ಆಚರಿಸಲಾಗ್ತಿದೆ. ಗಣೇಶನಿಗೆ ಭಕ್ತರು ಅಪ್ಪಿತಪ್ಪಿಯೂ ಕೆಲ ವಸ್ತುಗಳನ್ನು ಅರ್ಪಿಸಬಾರದು.
ಬಿಳಿ ಬಟ್ಟೆಗಳನ್ನು ಗಣೇಶನಿಗೆ ಎಂದಿಗೂ ಅರ್ಪಿಸಬಾರದು. ಬಿಳಿ ದಾರವನ್ನು ಸಹ ನೀಡಬಾರದು. ಬಿಳಿ ದಾರ ಅರ್ಪಣೆ ಅಶುಭವೆಂದು ಪರಿಗಣಿಸಲಾಗಿದೆ. ದೀಪದ ಎಳೆಯನ್ನು ಅಶಿರಿನದಲ್ಲಿ ಅದ್ದಿ ಗಣೇಶನಿಗೆ ಅರ್ಪಿಸಿ. ಹಳದಿ ಗಣೇಶನಿಗೆ ಪ್ರಿಯ ಬಣ್ಣ.
ಗಣೇಶನಿಗೆ ಅಕ್ಕಿ ಅರ್ಪಣೆ ಮಾಡ್ತಿದ್ದರೆ ಇಡಿ ಅಕ್ಕಿಯನ್ನು ಅರ್ಪಿಸಿ. ಮುರಿದ ಅಕ್ಕಿಯನ್ನು ಎಂದಿಗೂ ಅರ್ಪಿಸಬೇಡಿ.
ಗಣೇಶನಿಗೆ ಹಳದಿ ಬಣ್ಣ ತುಂಬಾ ಪ್ರಿಯ. ಬಿಳಿ ಶ್ರೀಗಂಧದ ಬದಲು, ಹಳದಿ ಶ್ರೀಗಂಧವನ್ನು ಅರ್ಪಿಸಿ. ಗಣೇಶನಿಗೆ ತಿಲಕ ಹಚ್ಚಿದ ನಂತ್ರ ಮನೆಯ ಎಲ್ಲರೂ ತಿಲಕವನ್ನಿಟ್ಟುಕೊಳ್ಳಿ.
ಗಣೇಶನನ್ನು ಪೂಜಿಸುವಾಗ, ತುಳಸಿ ಎಲೆಗಳನ್ನು ಅರ್ಪಿಸಬೇಡಿ. ತುಳಸಿಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ವಿಷ್ಣುವಿಗೆ ಅದು ಪ್ರಿಯ. ಆದ್ದರಿಂದ ತುಳಸಿಯ ಬದಲು ಗಣೇಶನಿಗೆ ಮೋದಕ ನೀಡಿ. ದೂರ್ವೆ ಅರ್ಪಿಸಿ.