alex Certify ವೈರಲ್ ಫೀವರ್‌ ಇದ್ದಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಫೀವರ್‌ ಇದ್ದಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ…!

ಹವಾಮಾನ ಬದಲಾದಂತೆ ಅನೇಕ ಕಾಯಿಲೆಗಳು ವಕ್ಕರಿಸುತ್ತವೆ. ವೈರಲ್‌ ಜ್ವರ ಕೂಡ ಇವುಗಳಲ್ಲೊಂದು. ಬದಲಾಗುತ್ತಿರುವ ಋತುವಿನಲ್ಲಿ ವೈರಲ್ ಜ್ವರದ ಅಪಾಯವು ಬಹಳಷ್ಟು ಹೆಚ್ಚಾಗುತ್ತದೆ. ಹಾಗಾಗಿಯೇ ಈ ಸಮಯದಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಕೊಳಕು ಬ್ಯಾಕ್ಟೀರಿಯಾ ಮತ್ತು ದುರ್ಬಲ ರೋಗನಿರೋಧಕ ಶಕ್ತಿ.

ವೈರಲ್ ಫೀವರ್ ಅತ್ಯಂತ ಸಾಮಾನ್ಯವಾದ ಸಮಸ್ಯೆ. ಆದರೆ ಈ ಸಮಯದಲ್ಲಿ ಸರಿಯಾದ ಕಾಳಜಿ ವಹಿಸುವುದು ಕೂಡ ಅಗತ್ಯ. ವೈರಲ್‌ ಫೀವರ್‌ ಇದ್ದಾಗ ಸ್ನಾನ ಮಾಡಬೇಕೋ ಬೇಡವೋ ಎಂಬ ಪ್ರಶ್ನೆ ಅನೇಕರಲ್ಲಿದೆ. ಇದು ಆರೋಗ್ಯ ತಜ್ಞರ ನಡುವೆಯೂ ವಿವಾದಾತ್ಮಕ ವಿಷಯವಾಗಿದೆ.

ವೈರಲ್ ಜ್ವರದ ಲಕ್ಷಣಗಳು

ವೈರಲ್ ಜ್ವರದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಮೈಕೈ ನೋವು, ತಲೆನೋವು, ಆಯಾಸ ಮತ್ತು ನಿದ್ರಾಹೀನತೆ. ಇದರಿಂದ ದೇಹವು ತುಂಬಾ ದುರ್ಬಲವಾಗುತ್ತದೆ. ಅದರ ಪರಿಣಾಮವು ದೀರ್ಘಕಾಲದವರೆಗೆ ಇದ್ದರೆ ತೂಕ ಸಹ ಕಡಿಮೆಯಾಗಬಹುದು.

ವೈರಲ್ ಜ್ವರವಿದ್ದಾಗ ಸ್ನಾನ ಮಾಡಬೇಕೇ ಅಥವಾ ಬೇಡವೇ?

ವೈರಲ್ ಜ್ವರದ ಸಂದರ್ಭದಲ್ಲಿ ಸ್ನಾನ ಮಾಡುವುದು ಆರೋಗ್ಯಕರ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ನಾನ ಮಾಡುವುದರಿಂದ ದೇಹದ ಕೊಳೆಯನ್ನು ತೆಗೆದುಹಾಕಬಹುದು, ಅಷ್ಟೇ ಅಲ್ಲ ಮಾನಸಿಕವಾಗಿ ಸಹ ಆಹ್ಲಾದಕರ ಭಾವನೆಯನ್ನು ನೀಡುತ್ತದೆ. ಆದ್ದರಿಂದ ವೈರಲ್‌ ಜ್ವರವಿದ್ದಾಗ ಸ್ನಾನ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಆದರೆ ಮಗುವಿಗೆ ಅಥವಾ ವಯಸ್ಸಾದ ವ್ಯಕ್ತಿಗೆ ವೈರಲ್ ಜ್ವರ ಬಂದರೆ  ಸ್ನಾನ ಮಾಡುವ ಮುನ್ನ ಎಚ್ಚರ ವಹಿಸಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ವೈದ್ಯಕೀಯ ಸ್ಥಿತಿಯು ಒಂದೇ ಆಗಿರುವುದಿಲ್ಲ. ನಮ್ಮ ದೇಹವು ವೈರಲ್ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗ ಅದನ್ನು ಮತ್ತಷ್ಟು ದಣಿಯದಂತೆ ನೋಡಿಕೊಳ್ಳಬೇಕು. ಸ್ನಾನ ಮಾಡುವುದರಿಂದ ರೋಗಲಕ್ಷಣಗಳು ಹೆಚ್ಚಾಗಬಹುದು.

ವೈರಲ್ ಜ್ವರದಿಂದ ಪಾರಾಗುವುದು ಹೇಗೆ?

ನಿಯಮಿತವಾಗಿ ಕೈಗಳನ್ನು ತೊಳೆಯಿರಿ ಮತ್ತು ಶುಚಿತ್ವ ಕಾಪಾಡಿಕೊಳ್ಳಿ. ವೈರಸ್ ನಿಮ್ಮಿಂದ ದೂರವಿದ್ದಷ್ಟೂ ವೈರಲ್ ಜ್ವರದ ದಾಳಿ ಕಡಿಮೆಯಾಗುತ್ತದೆ. ಬದಲಾಗುತ್ತಿರುವ ಹವಾಮಾನದಲ್ಲಿ ಮಾಸ್ಕ್‌ ಧರಿಸುವುದು ಉತ್ತಮ. ವೈರಲ್ ಜ್ವರ ಪೀಡಿತರಿದ್ದರೆ ಅವರಿಂದ ಅಂತರ ಕಾಪಾಡಿಕೊಳ್ಳಿ. ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...