ಕೆಲವೊಂದು ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆಹಾರ ಸೇವನೆ ಮಾಡಿದ ನಂತ್ರ ಏನು ಮಾಡಬೇಕು ಎಂಬುದು ಗೊತ್ತಿರಬೇಕು. ಆಹಾರ ಸೇವಿಸಿದ ನಂತ್ರ ಮಾಡುವ ಕೆಲವೊಂದು ತಪ್ಪುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಬೇಸಿಗೆ ಕಾಲವಿರಲಿ ಇಲ್ಲ ನಿದ್ರೆ ಮಾಡುವ ಮೊದಲು ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ. ಆದ್ರೆ ಆಹಾರ ಸೇವನೆ ಮಾಡಿದ ತಕ್ಷಣ ಸ್ನಾನ ಮಾಡುವುದು ಒಳ್ಳೆಯದಲ್ಲ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಅಜೀರ್ಣ, ಎದೆಯುರಿ, ಕಿರಿಕಿರಿ ಸಮಸ್ಯೆಗೆ ಕಾರಣವಾಗುತ್ತದೆ. ಆಹಾರ ಸೇವನೆ ಮಾಡಿ 20 ನಿಮಿಷಗಳ ನಂತ್ರ ಸ್ನಾನ ಮಾಡಬೇಕು.
ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಒಳ್ಳೆಯ ಅಭ್ಯಾಸ. ಆದರೆ ಆಹಾರ ಸೇವಿಸಿದ ಕೂಡಲೇ ಈ ಕೆಲಸವನ್ನು ಮಾಡಬೇಡಿ. ಇದು ಹಲ್ಲು ಹಾಳಾಗಲು ಕಾರಣವಾಗುತ್ತದೆ. ಆಹಾರವನ್ನು ಸೇವಿಸಿದ 30 ನಿಮಿಷಗಳ ನಂತ್ರ ಹಲ್ಲುಜ್ಜಬೇಕು.
ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಆಹಾರ ಸೇವನೆ ಮಾಡಿದ ನಂತ್ರ ವ್ಯಾಯಾಮ ಮಾಡುವುದು ಒಳ್ಳೆಯದೆಂದು ಕೆಲವರು ಭಾವಿಸಿದ್ದಾರೆ. ಆದ್ರೆ ಇದು ತಪ್ಪು. ತಿಂದ ಕೂಡಲೇ ವ್ಯಾಯಾಮ ಮಾಡುವುದರಿಂದ ಹೊಟ್ಟೆ ನೋವು, ವಾಂತಿ ಮತ್ತು ಸೋಮಾರಿತನ ಉಂಟಾಗುತ್ತದೆ. ಆಹಾರ ಸೇವನೆ ಮಾಡಿದ ಕನಿಷ್ಠ 45 ನಿಮಿಷದ ನಂತ್ರ ವ್ಯಾಯಾಮ ಮಾಡಬೇಕು.
ಆಹಾರ ಸೇವನೆ ಮಾಡಿದ ತಕ್ಷಣ ಮಲಗುವುದು ಕೆಟ್ಟ ಹವ್ಯಾಸ. ಇದು ಜೀರ್ಣಾಂಗ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಎದೆಯುರಿ ಸಮಸ್ಯೆ ಕಾಡುತ್ತದೆ.