ಅಮೆರಿಕದ ನಾಯಿಯೊಂದು ಅತಿ ಹೆಚ್ಚು ಉದ್ದದ ನಾಲಗೆ ಹೊಂದಿರುವ ನಾಯಿಯೆಂದು ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ. ಝೋಯ್ ಹೆಸರಿನ ನಾಯಿ 12.7 ಸೆಂ.ಮೀ (5 ಇಂಚು) ಅಳತೆಯ ನಾಲಗೆಯನ್ನ ಹೊಂದಿದ್ದು ಅತಿ ಹೆಚ್ಚು ಉದ್ದದ ನಾಲಗೆ ಹೊಂದಿರುವ ಜೀವಂತ ನಾಯಿ ಎಂದು ಗಿನ್ನೆಸ್ ರೆಕಾರ್ಡ್ ಮಾಡಿದೆ.
ಲ್ಯಾಬ್ರಡಾರ್/ಜರ್ಮನ್ ಶೆಫರ್ಡ್ ಮಿಶ್ರ ತಳಿಯಾದ ನಾಯಿಯ ನಾಲಗೆಯೂ ಆರಂಭದಲ್ಲೇ ಅತಿ ಉದ್ದ ಇದ್ದುದನ್ನ ಮಾಲೀಕರು ಗಮನಿಸಿದ್ದರು. ಲೂಸಿಯಾನಾದಲ್ಲಿನ ಈ ನಾಯಿಯ ನಾಲಗೆ ಸೋಡಾ ಕ್ಯಾನ್ ಗಿಂತಲೂ ಉದ್ದವಾಗಿದೆ.
ಹೊರಾಂಗಣದಲ್ಲಿರುವುದು, ಚೆಂಡುಗಳನ್ನು ತರುವುದು, ಅಳಿಲುಗಳನ್ನು ಬೆನ್ನಟ್ಟುವುದು, ಕಾರ್ ಸವಾರಿ ಮತ್ತು ಕಾಲುವೆಯಲ್ಲಿ ಈಜುವುದು ಝೋಯ್ ಗೆ ಅತ್ಯಂತ ಇಷ್ಟವಂತೆ. ಆದರೆ ಈ ನಾಯಿಗೆ ಸ್ನಾನ ಮಾಡೋದು ಅಂದ್ರೆ ಆಗಲ್ವಂತೆ.
9.49 ಸೆಂ.ಮೀ. (3.74 ಇಂಚು) ಉದ್ದದ ನಾಲಗೆ ಹೊಂದಿರುವ ಬಿಸ್ಬೀ ಎಂಬ ನಾಯಿಯ ದಾಖಲೆಯನ್ನ ಇದೀಗ ಝೋಯ್ ಮುರಿದಿದೆ.