ದಂಪತಿಗಳ ಅಥವಾ ಪ್ರೇಮಿಗಳ ಮಧ್ಯೆ ಪ್ರೀತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತಿದೆಯೇ. ಸಂಬಂಧದಲ್ಲಿ ರುಚಿ ಇಲ್ಲ ಎನಿಸುತ್ತಿದೆಯೇ. ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಮತ್ತೆ ನಿಮ್ಮ ಪ್ರೀತಿಯ ಬದುಕನ್ನು ಮೊದಲಿನಿಂದಲೇ ಆರಂಭಿಸಬಹುದು.
ನಿಮ್ಮ ಸಂಗಾತಿಗೂ ಸ್ಪೇಸ್ ಬೇಕಾಗುತ್ತದೆ ಎಂಬುದನ್ನು ಮರೆಯದಿರಿ. ನಾನು ಹೇಳಿದ್ದೇ ನಡೆಯಬೇಕು ಎಂದು ಹಠ ಮಾಡುವುದನ್ನು ಬಿಟ್ಟುಬಿಡಿ. ನಿಮ್ಮಿಬ್ಬರ ಮಧ್ಯೆ ಕೋಪವಿದ್ದರೆ ಸಂಗಾತಿಯನ್ನು ನಿರ್ಲಕ್ಷಿಸದಿರಿ. ಇದರಿಂದ ಅವರು ನಿಮ್ಮ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ ಹಾಗೂ ನಿಮ್ಮ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂಬುದನ್ನು ನೆನಪಿಡಿ.
ಕೆಲವೊಮ್ಮೆ ಇಬ್ಬರ ಪೈಕಿ ಒಬ್ಬರಿಗೆ ವಿಚಿತ್ರ ಎನ್ನುವಂತ ಬಯಕೆಗಳು ಮೂಡಬಹುದು. ಅದನ್ನು ನೀವು ತಮಾಷೆ ಮಾಡದಿರಿ. ಸಂಗಾತಿಯನ್ನು ಗೌರವದಿಂದ ನೋಡುವುದನ್ನು ಕಲಿಯಿರಿ. ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ.
ಎಲ್ಲವನ್ನೂ ಹಂಚಿಕೊಳ್ಳುವುದು ಹೌದಾದರೂ ಕೆಲವೊಂದು ಚೌಕಟ್ಟುಗಳನ್ನು ಹಾಕಿಕೊಳ್ಳಲು ಮರೆಯದಿರಿ. ಜಗಳವಾಡುವ ಮೂಡ್ ನಲ್ಲಿ ನೀವಿದ್ದರೂ ಸಮಾಧಾನದಿಂದ ಮಾತನಾಡಲು ಕಲಿಯಿರಿ. ತಪ್ಪಿದ್ದಾಗ ಕ್ಷಮೆ ಕೇಳಿ, ದೊಡ್ಡತನ ಮೆರೆಯಿರಿ.