ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯನ್ನು ಸಿಎಂಗೆ ಲಿಂಕ್ ಮಾಡೋದಕ್ಕೆ ಬಿಜೆಪಿ ಬಳಿ ದಾಖಲೆ ಇದ್ಯಾ? ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಗುತ್ತಿಗೆದಾರರ ಮೇಲಿನ ದಾಳಿಗೂ ಕಾಂಗ್ರೆಸ್ ಗೂ ಏನು ಸಂಬಂಧ..? ಮುಖ್ಯಮಂತ್ರಿಗಳಿಗೆ ಇದನ್ನು ಲಿಂಕ್ ಮಾಡೋದಕ್ಕೆ ಬಿಜೆಪಿ ಬಳಿ ಏನು ದಾಖಲೆ ಇದೆ..? ಇದು ಬಿಜೆಪಿ ಹಣ, ಜೆಡಿಎಸ್ನವರ ಹಣ ಅಂತಾ ನಾನು ಕೂಡ ಹೇಳುತ್ತೇನೆ. ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯಗೆ ಲಿಂಕ್ ಇದೆ ಅನ್ನೋದನ್ನು ಬಿಜೆಪಿಯವರು ಸಾಬೀತು ಮಾಡ್ತಾರಾ? ಎಂದು ಎಂಬಿ ಪಾಟೀಲ್ ಸವಾಲ್ ಹಾಕಿದ್ದಾರೆ. ಕಮಿಷನ್ ಅನ್ನೋದು ಕಾಂಗ್ರೆಸ್ ನದ್ದಲ್ಲ , ಕಮಿಷನ್ ಅನ್ನೋದು ಬಿಜೆಪಿ ಹಾಗೂ ಜೆಡಿಎಸ್ ಗೆ ಚೆನ್ನಾಗಿ ಗೊತ್ತಿದೆ ಎಂದರು.