ಆಯುಷ್ಮತಿ ಕ್ಲಿನಿಕ್ ಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

 ದಾವಣಗೆರೆ: ಪ್ರಸಕ್ತ ಸಾಲಿನ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಹಾಗೂ ಪಿಎಂ ಭೀಮ್ ಕಾರ್ಯಕ್ರಮದಡಿ ಆಯುಷ್ಮತಿ ಕ್ಲಿನಿಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ತಜ್ಞ ವೈದ್ಯರ ಅಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

 ಹುದ್ದೆಯ ವಿವರ:

ಸ್ತ್ರೀ ರೋಗ ತಜ್ಞರು 4, ಮೂಳೆ ಮತ್ತು ಕೀಲು ತಜ್ಞರು 4, ಶಸ್ತ್ರ ಚಿಕಿತ್ಸಾ ತಜ್ಞರು 4, ಮಕ್ಕಳ ತಜ್ಞರು 4, ಚರ್ಮ ರೋಗ ತಜ್ಞರು 4, ಫಿಜಿಷಿಯನ್ 4, ಮನರೋಗ ತಜ್ಞರು 4, ಕಿವಿ, ಮೂಗು ಮತ್ತು ಗಂಟಲು ತಜ್ಞರು 4.

 ವಿದ್ಯಾರ್ಹತೆ:

ಎಂ.ಬಿ.ಬಿ.ಎಸ್.ಉತ್ತೀರ್ಣರಾಗಿರಬೇಕು, ಸ್ನಾತಕೋತ್ತರ ಪದವಿ ಹೊಂದಿರಬೇಕು, ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು ಹಾಗೂ ಕೆ.ಎಂ.ಸಿ.ಯ ನೋಂದಣಿಯನ್ನು ಹೊಂದಿರತಕ್ಕದು. ಮಾನ್ಯತೆ ಪಡೆದ ವಿದ್ಯಾಲಯಯದಿಂದ ಕಾನ್ವಕೇಷನ್, ಪದವಿ ಪ್ರಮಾಣಪತ್ರ, ಪಿಜಿ ಪ್ರಮಾಣಪತ್ರ ಹೊಂದಿರಬೇಕು. ವಯೋಮಿತಿ ಗರಿಷ್ಠ 70 ವರ್ಷ ಆಗಿರಬೇಕು.

ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳ ಕಛೇರಿ, ಸಮಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ಗಂಟೆಯೊಳಗೆ, ಶ್ರೀರಾಮನಗರ ರಸ್ತೆ, ಎಸ್.ಎಸ್.ಆಸ್ಪತ್ರೆ ಹಿಂಭಾಗ, ಎನ್.ಸಿ.ಸಿ.ಕ್ಯಾಂಪ್ ಪಕ್ಕ, ದಾವಣಗೆರೆ ಇಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9341776436 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read