ಬಹುಬೇಗ ವಯಸ್ಸಾಗುವುದನ್ನು ತಪ್ಪಿಸಲು ನೀವು ಈ ಕೆಲವು ಕೆಲಸಗಳನ್ನು ಮಾಡದಿರುವುದು ಬಹಳ ಒಳ್ಳೆಯದು. ಅವುಗಳು ಯಾವುವು ಎಂದಿರಾ ?
ತ್ವಚೆಯ ಮೇಲೆ ಮುಪ್ಪಿನ ಲಕ್ಷಣಗಳು ಗೋಚರಿಸದಂತೆ ಮಾಡಲು ವ್ಯಾಯಾಮ ಮಾಡುವಾಗ ಹೆಚ್ಚಿನ ಭಾರ ಎತ್ತಲು ಹೋಗಬೇಡಿ. ಹೆಚ್ಚಿನ ಭಾರ ಎತ್ತುವಾಗ ಸ್ನಾಯುಗಳ ಮೇಲೆ ಜಾಸ್ತಿ ಒತ್ತಡ ಬಿದ್ದು ತ್ವಚೆಯಲ್ಲಿ ನೆರಿಗೆ ಮೂಡುವ ಸಾಧ್ಯತೆ ಹೆಚ್ಚು. ಹಾಗಾಗಿ ಹೆಚ್ಚು ವೇಟ್ ಲಿಫ್ಟಿಂಗ್ ಮಾಡದಿರಿ.
ಉಪ್ಪು ಹೆಚ್ಚಿರುವ ವಸ್ತುಗಳು ಅಂದರೆ ಉಪ್ಪಿನಕಾಯಿ ಹಾಗೂ ಸಿಹಿ ಹೆಚ್ಚಿರುವ ಸ್ವೀಟ್ ಗಳೆಂದರೆ ನಿಮಗೆ ಬಹಳ ಇಷ್ಟವೇ? ಹಾಗಿದ್ದರೆ ನಿಮ್ಮ ದೇಹ ಬಹು ಬೇಗ ರೋಗಗಳ ಗೂಡಾಗುತ್ತದೆ. ಉಪ್ಪು ಹೆಚ್ಚು ಸೇವಿಸುವುದರಿಂದ ಬಹುಬೇಗ ತ್ವಚೆಯ ಮೇಲೆ ಸುಕ್ಕು ನೆರಿಗೆ ಮೂಡುತ್ತದೆ.
ಪವರ್ ಗ್ಲಾಸ್ ಧರಿಸುವುದರಿಂದ ಕಣ್ಣುಗಳ ಸುತ್ತಲಿನ ಸ್ನಾಯುಗಳು ಬಹುಬೇಗ ಆಯಾಸವಾಗುತ್ತದೆ. ಕಣ್ಣಿನ ಕೆಳಭಾಗದ ತ್ವಚೆ ಹೆಚ್ಚು ಸೂಕ್ಷ್ಮವಾಗಿರುವುದರಿಂದ ಈ ಭಾಗವನ್ನು ರಕ್ಷಿಸುವುದು ಬಹಳ ಮುಖ್ಯ.