ಕೆಲವರಿಗೆ ಟಾಯ್ಲೆಟ್ ಕಮೋಡ್ ಮೇಲೆ ಕೂತು ಮೊಬೈಲ್ ಒತ್ತುವ, ಬಾಯಲ್ಲಿ ಏನನ್ನಾದರೂ ಹಾಕಿಕೊಂಡು ಜಗಿಯುವ ಅಭ್ಯಾಸ ಇರುತ್ತದೆ. ಇದು ಖಂಡಿತಾ ಒಳ್ಳೆಯದಲ್ಲ. ಏಕೆಂದರೆ……
ಟಾಯ್ಲೆಟ್ ನಲ್ಲಿ ಈ ಕೆಲಸ ಮಾಡುವುದರಿಂದ ನೀವು ಮಾರಣಾಂತಿಕ ರೋಗಕ್ಕೆ ಒಳಗಾಗಬಹುದು. ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಖಾಯಿಲೆ ನಿಮ್ಮನ್ನು ಕಾಡಬಹುದು.
ಮೊಬೈಲ್ ಮೇಲೆಯೇ ನಿಮ್ಮ ಗಮನ ಹರಿಸುತ್ತಾ ಹೆಚ್ಚು ಹೊತ್ತು ಟಾಯ್ಲೆಟ್ ನಲ್ಲಿ ಕುಳಿತಿರುವುದರಿಂದ ಪೈಲ್ಸ್ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು. ಇನ್ನು ಕೆಲವರು ಟಾಯ್ಲೆಟ್ ನಲ್ಲಿ ಕೂತು ದಿನ ಪತ್ರಿಕೆ ಓದುತ್ತಾ ಕೂರುತ್ತಾರೆ. ಇಲ್ಲಿ ಅವರಿಗೆ ಸಮಯದ ಪರಿವೆಯೇ ಇರುವುದಿಲ್ಲ. ಹಾಗಾಗಿ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಿ ಪೈಲ್ಸ್ ಸಮಸ್ಯೆ ಕಾಡಬಹುದು.
ಟಾಯ್ಲೆಟ್ ನಿಂದ ಹೊರಬಂದಾಕ್ಷಣ ನೀವು ಕೈ – ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತೀರಿ. ಅದೇ ಮೊಬೈಲ್ ಅನ್ನು ಸ್ವಚ್ಛಗೊಳಿಸುವುದಿಲ್ಲವಲ್ಲ. ಅದರಲ್ಲಿರುವ ಬ್ಯಾಕ್ಟೀರಿಯಾಗಳು ಇನ್ ಫೆಕ್ಷನ್ ಸಂಬಂಧಿ ಹಲವು ರೋಗಗಳನ್ನು ಹುಟ್ಟು ಹಾಕಬಹುದು.