ದೂರದರ್ಶನ ಅನ್ನೋದು ಹೆಚ್ಚಿನ ಮನೆಗಳಲ್ಲಿ ಪ್ರಮುಖ ಎಲೆಕ್ಟ್ರಾನಿಕ್ ಸಾಧನವಾಗಿದೆ. ನೈಸರ್ಗಿಕವಾಗಿ ಟಿವಿ, ಮಾಸಿಕ ವಿದ್ಯುತ್ ಬಿಲ್‌ಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಭಾರತದಲ್ಲಿ ಸುಮಾರು 70% ಕುಟುಂಬಗಳು ತಮ್ಮ ಟಿವಿ ಸೆಟ್‌ಗಳನ್ನು ಮುಖ್ಯ ಸ್ವಿಚ್‌ನಿಂದ ಸ್ವಿಚ್ ಆಫ್ ಮಾಡುವುದಿಲ್ಲ ಬದಲಿಗೆ ರಿಮೋಟ್ ಕಂಟ್ರೋಲ್ ಬಳಸಿ ಸ್ವಿಚ್ ಆಫ್ ಮಾಡುತ್ತಾರೆಂದು ವರದಿಯಾಗಿದೆ.
ಈ ರೀತಿ ಸ್ವಿಚ್ ಆಫ್ ಆಗಿರುವ ಟೆಲಿವಿಷನ್‌ಗಳು ಇನ್ನೂ ಹೆಚ್ಚಿನ ವಿದ್ಯುತ್ ಶಕ್ತಿಯನ್ನು ಬಳಸುತ್ತವೆ. ಇದರಿಂದ ಮನೆಯ ಬಜೆಟ್ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನ ಹೇಳಬೇಕಿಲ್ಲ. ಇನ್ನು ಸ್ಟಾಂಡ್ ಬೈ ನಲ್ಲಿರುವ ಇಂತಹ ಎಲೆಕ್ಟ್ರಾನಿಕ್ಸ್ ನಿಂದ ವಿದ್ಯುತ್ ಕೂಡ ವ್ಯರ್ಥವಾಗಿ ವೆಚ್ಚವಾಗುತ್ತಿದೆ ಎಂಬುದು ಗಮನಾರ್ಹ.
ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇಡಬಾರದು ಏಕೆಂದರೆ ಅವುಗಳು ಸುಪ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಹೀಗಾಗಿ ಪ್ಲಗ್ ಸಾಕೆಟ್‌ನಿಂದ ವಿದ್ಯುತ್ ಅನ್ನು ಬಳಸುತ್ತಲೆ ಇರುತ್ತವೆ. ಟಿವಿ ಸೆಟ್ ಅನ್ನು ರಿಮೋಟ್ ಕಂಟ್ರೋಲ್ ಬಳಸಿ ಆಫ್ ಮಾಡುವುದು ಸುಲಭವಾದರೂ, ಈ ಸೌಲಭ್ಯಕ್ಕೆ ಹೆಚ್ಚಿನ ಬೆಲೆ ತೆರಬೇಕು ಎಂಬುದನ್ನ ಗಮನದಲ್ಲಿಡಿ.
ಸ್ಟ್ಯಾಂಡ್‌ಬೈನಲ್ಲಿ ಟಿವಿ ಎಷ್ಟು ವಿದ್ಯುತ್ ಬಳಸುತ್ತದೆ ?
ಸ್ಟ್ಯಾಂಡ್‌ಬೈನಲ್ಲಿರುವ ಟಿವಿ ಬಳಸುವ ವಿದ್ಯುತ್ ಪ್ರಮಾಣವು ಅದರ ತಂತ್ರಜ್ಞಾನ, ಮಾದರಿ, ಗಾತ್ರ ಮತ್ತು ಅದರ ದಕ್ಷತೆಯ ಮೇಲೆ ಅವಲಂಬಿತವಾಗಿರುತ್ತದೆ. ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಪವರ್ ರೇಟಿಂಗ್ ಅನ್ನು ಹೊಂದಿದ್ದು ಅದು ಕೆಲಸ ಮಾಡಲು ಗ್ಯಾಜೆಟ್ ಎಷ್ಟು ವಿದ್ಯುತ್ ಬಳಸುತ್ತದೆ ಎಂಬುದನ್ನು ಗ್ರಾಹಕರಿಗೆ ಸೂಚಿಸುತ್ತದೆ. ಈ ರೇಟಿಂಗ್ ಅನ್ನು ಸಾಮಾನ್ಯವಾಗಿ ವ್ಯಾಟ್ ಅಥವಾ ಕಿಲೋವ್ಯಾಟ್ ನಲ್ಲಿ ನೀಡಲಾಗುತ್ತದೆ.
ತಜ್ಞರ ಪ್ರಕಾರ, ಸ್ಟ್ಯಾಂಡ್‌ಬೈನಲ್ಲಿರುವ ಟಿವಿ ಗಂಟೆಗೆ 10 ವ್ಯಾಟ್‌ಗಳವರೆಗೆ ಬಳಸುತ್ತದೆ. ವೈಯಕ್ತಿಕ ಬಳಕೆ, ಜಿಯೋಲೊಕೇಶನ್‌ನಂತಹ ಅಂಶಗಳ ಆಧಾರದ ಮೇಲೆ ವಿದ್ಯುತ್ ಬಳಕೆಯು ಬದಲಾಗಬಹುದು ಎಂಬುದನ್ನ ಗಮನಿಸಬೇಕು. ಟಿವಿಯನ್ನು ಸ್ಟ್ಯಾಂಡ್‌ಬೈನಲ್ಲಿ ಇಡುವ ಮತ್ತು ರಿಮೋಟ್ ಕಂಟ್ರೋಲ್ ಮೂಲಕ ಮಾತ್ರ ಸ್ವಿಚ್ ಆಫ್ ಮಾಡುವ ಅಭ್ಯಾಸವು ಮಾಸಿಕ ವಿದ್ಯುತ್ ಬಿಲ್ ಮೇಲೆ ನೂರು ರೂಪಾಯಿ ಹೆಚ್ಚಳ ಮಾಡುತ್ತವೆ. ಅಂದರೆ ಸ್ಟಾಂಡ್ ಬೈನಲ್ಲಿರುವ ಟಿವಿಯು ಒಂದು ವರ್ಷಕ್ಕೆ 1200 ರೂಪಾಯಿಯಷ್ಟು ವಿದ್ಯುತ್ ಬಳಸುತ್ತದೆ.