ನಮ್ಮ ಕರುಳಿನಲ್ಲಿ ವಾಸವಿರುವ ಪರಾವಲಂಬಿ ಹುಳುಗಳ ಹುಟ್ಟಿಗೆ ಒಂದು ರೀತಿಯಲ್ಲಿ ನಾವೇ ಕಾರಣರು. ಮಕ್ಕಳು ಹಾಗೂ ವಯಸ್ಕರಿಗೆ ಹಲವು ರೀತಿಯಲ್ಲಿ ಕಾಟ ಕೊಡುವ ಹುಳದ ಸಮಸ್ಯೆಯ ಲಕ್ಷಣಗಳು ಇವು.
ಕೊಳಕು ಆಹಾರ ಅಥವಾ ನೀರಿನ ಸೇವನೆ, ಸರಿಯಾಗಿ ಬೇಯಿಸದ ಮಾಂಸ ಸೇವನೆ, ಸ್ವಚ್ಚತೆ ಕಾಪಾಡಿಕೊಳ್ಳದಿರುವುದರಿಂದ ಸಣ್ಣ ಸಣ್ಣ ಹುಳುಗಳು ದೇಹದಲ್ಲಿ ಸಂತತಿಯನ್ನು ವೃದ್ಧಿಸಿಕೊಂಡು ಮನುಷ್ಯನ ಆರೋಗ್ಯ ಅದರಲ್ಲೂ ಕರುಳಿನ ಆರೋಗ್ಯವನ್ನು ಹಾನಿಮಾಡುತ್ತದೆ.
ಮಲಬದ್ಧತೆ, ತೀವ್ರ ಹೊಟ್ಟೆ ನೋವು ಮತ್ತು ಹೊಟ್ಟೆ ಉಬ್ಬರ, ಬೇಧಿ, ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆ ಆಗುವುದು ಇವೆಲ್ಲ ಹೊಟ್ಟೆ ಹುಳುವಿರುವ ಸೂಚನೆಗಳು. ಕೆಲವು ಪ್ರಕರಣಗಳಲ್ಲಿ ಮಾತ್ರ ಆಮಶಂಕೆ ಉಂಟಾಗಿ ಮಲದಲ್ಲಿ ವಿಪರೀತ ರಕ್ತ, ಕಫ ಕಂಡು ಬರುತ್ತದೆ. ಇದಕ್ಕೆ ಮನೆ ಮದ್ದು ಮಾಡುವ ಬದಲು ವೈದ್ಯರ ಅಭಿಪ್ರಾಯ ಪಡೆದು ಔಷಧ ಪಡೆಯುವುದು ಉತ್ತಮ.