ಬಿಕ್ಕಳಿಕೆ ಬರಲು ಆರಂಭಿಸಿದ ತಕ್ಷಣ ಏನನ್ನೋ ಕದ್ದು ತಿಂದಿದ್ದೀಯಾ ಎಂದು ಮನೆಯವರು ಪ್ರಶ್ನಿಸುವುದನ್ನು ಕೇಳಿರಬಹುದು ಇಲ್ಲವೇ ಯಾರೋ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ.
ಕೆಲವೊಮ್ಮೆ ಗಟಗಟನೆ ನೀರು ಕುಡಿಯುವುದರಿಂದ ಬಿಕ್ಕಳಿಗೆ ನಿಲ್ಲುತ್ತದೆ. ಆದರೆ ಕೆಲವೊಮ್ಮೆ ಬಿಡದೇ ಮುಂದುವರಿಯುತ್ತದೆ. ಕಚೇರಿ ಅಥವಾ ಸಭೆ ಸಮಾರಂಭಗಳಲ್ಲಿ ಬಿಕ್ಕಳಿಕೆ ಬಂದು ಕೆಲವೊಮ್ಮೆ ಮುಜುಗರ ಸೃಷ್ಟಿಸುತ್ತದೆ.
ಬಿಕ್ಕಳಿಗೆ ಬಂದರೆ ಒಂದು ಚಮಚ ಜೇನು ತುಪ್ಪವನ್ನು ಬಿಸಿನೀರಿನಲ್ಲಿ ಕದಡಿ ಕುಡಿದರೆ ಸಾಕು, ಬಿಕ್ಕಳಿಗೆ ನಿಲ್ಲುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೂ ಬಿಕ್ಕಳಿಗೆ ಬರುತ್ತದೆ ಎನ್ನಲಾಗುತ್ತದೆ.
ಬಿಕ್ಕಳಿಕೆ ನಿಲ್ಲದಿದ್ದರೆ ಒಂದು ತುಂಡು ಬೆಲ್ಲವನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ಇದರಿಂದ ಒಸರುವ ನೀರನ್ನು ನುಂಗಿ. ಇದು ಬಿಕ್ಕಳಿಕೆಯಿಂದ ಮುಕ್ತಿ ನೀಡುತ್ತದೆ.
ಮೂಗನ್ನು ಒತ್ತಿ ಹಿಡಿದು ಸ್ವಲ್ಪ ಹೊತ್ತು ಉಸಿರು ಕಟ್ಟುವುದರಿಂದಲೂ ಬಿಕ್ಕಳಿಕೆ ನಿಲ್ಲಿಸಬಹುದು. ಆಗ ದೇಹಕ್ಕೆ ಆಮ್ಲಜನಕ ಸಿಗದೆ ಬಿಕ್ಕಳಿಕೆ ನಿಲ್ಲುವುದುಂಟು. ಎರಡೂ ಕೈಯಿಂದ ಕಿವಿಗಳನ್ನು ಮುಚ್ಚಿ ನೋಡಿ. ಬಿಕ್ಕಳಿಕೆ ದೂರವಾಗುತ್ತದೆ.