ಮೊದಲ ಪ್ರೀತಿ-ಪ್ರಣಯ ಎಲ್ಲರಿಗೂ ವಿಶೇಷವಾಗಿರುತ್ತದೆ. ಮೊದಲ ಸ್ಪರ್ಶ, ಮೊದಲ ಅಪ್ಪುಗೆ, ಮೊದಲ ಮುತ್ತು ಎಲ್ಲವೂ ವಿಶೇಷ ಸಂತೋಷವನ್ನು ನೀಡುತ್ತದೆ. ಸಂಬಂಧವನ್ನು ಬಲಪಡಿಸಲು ಮತ್ತು ಸಂಬಂಧವನ್ನು ಶಾಶ್ವತವಾಗಿಡಲು ಅನ್ಯೋನ್ಯತೆ ಬಹಳ ಮುಖ್ಯ. ಮೊದಲ ಬಾರಿ ಮುತ್ತಿಡುವುದು ಹೇಳಿದಷ್ಟು ಸುಲಭವಲ್ಲ. ಮೊದಲ ಬಾರಿ ಚುಂಬಿಸುವ ವೇಳೆ ಹುಡುಗಿಯರ ತಲೆಯಲ್ಲಿ ಅನೇಕ ಪ್ರಶ್ನೆಗಳು ಓಡುತ್ತವೆ.
ಮೊದಲ ಬಾರಿ ಚುಂಬಿಸುವ ಪ್ರತಿಯೊಬ್ಬ ಹುಡುಗಿಯೂ, ಮುತ್ತಿಡುವಾಗ ಹಲ್ಲುಗಳು ಆತನಿಗೆ ತಾಗಿದೆಯಾ ಎಂಬ ಗೊಂದಲದಲ್ಲಿರುತ್ತಾಳೆ. ಹಲ್ಲುಗಳು ತಾಗಿದ್ರೆ ಆತ ಏನಂದುಕೊಳ್ಳುತ್ತಾನೆ ಎಂದು ಆಲೋಚನೆ ಮಾಡ್ತಾಳೆ.
ಮೊದಲ ಬಾರಿ ಮುತ್ತಿಡುವಾಗ ಹುಡುಗಿಯರು ಮಾತ್ರವಲ್ಲ ಹುಡುಗರು ಕೂಡ ಬಾಯಿ ವಾಸನೆ ಬಗ್ಗೆ ಆಲೋಚನೆ ಮಾಡ್ತಾರೆ. ಬಾಯಿಯಿಂದ ಬರುವ ವಾಸನೆ ಮಧುರ ಕ್ಷಣವನ್ನು ಹಾಳು ಮಾಡುತ್ತದೆ. ಹಾಗಾಗಿ ಬಾಯಿ ವಾಸನೆ ಬಂದ್ರೆ ಏನು ಮಾಡುವುದು ಎಂಬ ಪ್ರಶ್ನೆ ಕಾಡುತ್ತದೆ. ಸಾಮಾನ್ಯವಾಗಿ ಮುತ್ತಿಡುವ ಮೊದಲು ಮೌತ್ ಫ್ರೆಶ್ನರ್ ಬಳಸಿ.
ಸಂಬಂಧವನ್ನು ಗಟ್ಟಿಗೊಳಿಸಲು ಮುತ್ತು ಸಹಾಯಕಾರಿ. ಅನೇಕ ದಿನಗಳಿಂದ ಇಬ್ಬರಿಗೆ ಪರಿಚಯವಿದ್ದರೂ ಮೊದಲು ಮುತ್ತಿಡುವುದು ಸುಲಭವಲ್ಲ. ನಂತ್ರ ಎಷ್ಟೇ ಮುತ್ತುಗಳ ಹಂಚಿಕೆಯಾಗ್ಲಿ ಆದ್ರೆ ಮೊದಲ ಮುತ್ತಿನ ವೇಳೆ ಭಯವಿರುತ್ತದೆ. ಅಂತೂ-ಇಂತೂ ಮುತ್ತಿಟ್ಟ ನಂತ್ರ ಹುಡುಗಿಯರು ಅಬ್ಬಾ, ಮುಗಿತು ಎಂಬ ಭಾವನೆಗೆ ಒಳಗಾಗ್ತಾರೆ.
ಮೊದಲ ಮುತ್ತಿನ ನಂತ್ರ ಹುಡುಗನ ಭಾವನೆ ತಿಳಿಯಲು ಹುಡುಗಿಯರು ಬಯಸ್ತಾರೆ. ಆತನಿಗೆ ಇಷ್ಟವಾಯ್ತಾ? ಆತನ ಭಾವನೆ ಹೇಗಿದೆ? ಆತ ತನ್ನನ್ನು ಬಿಟ್ಟರೆ? ಹೀಗೆ ಅನೇಕ ಪ್ರಶ್ನೆಗಳು ಓಡುತ್ತವೆ. ಮೊದಲ ಮುತ್ತಿನಿಂದ ಏನೂ ಬದಲಾಗುವುದಿಲ್ಲ. ಅದ್ರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.