ಹಿಂದೂ ಸಂಪ್ರದಾಯ ಪಾಲಿಸುವ ಹೆಚ್ಚಿನವರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಹಲವು ರೋಗಗಳಿಗೆ ಮದ್ದು ಎಂದು ಹೇಳಲಾಗುತ್ತದೆ. ಹೀಗಾಗಿ ತುಳಸಿ ಗಿಡ ಮನೆ ಸುತ್ತ ಇರುವುದರಿಂದ ಆಗುವ ಲಾಭಗಳೇನು ನೋಡೋಣ.
ಸೊಳ್ಳೆ ಬರಲ್ಲ
ಸಂಜೆಯಾದರೆ ಸಾಕು ಸೊಳ್ಳೆ ಕಾಟ ಎನ್ನುವವರು ಮನೆಯ ಸುತ್ತ ಹೆಚ್ಚು ಹೆಚ್ಚು ತುಳಸಿ ಗಿಡ ನೆಟ್ಟು ನೋಡಿ. ಇದರ ಸುವಾಸನೆಗೆ ಸೊಳ್ಳೆ ಹೆಚ್ಚು ಸುಳಿಯಲಾರದು.
ನಿರ್ಮಲ ಗಾಳಿ
ಇದು ಗಾಳಿಯನ್ನು ನಿರ್ಮಲಗೊಳಿಸುತ್ತದೆ. ಬೇರೆ ಸಸ್ಯ ಸಂಕುಲಗಳಿಗೆ ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಅಂದಾಜು ದಿನಕ್ಕೆ 20 ಗಂಟೆಗಳ ಕಾಲ ಇದು ಆಮ್ಲಜನಕ ಹೊರಸೂಸುತ್ತವೆ ಎನ್ನಲಾಗಿದೆ. ಅಲ್ಲದೆ ಇದರಿಂದ ಹೊರಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮಗೊಳಿಸುತ್ತದೆ.
ರೋಗಗಳಿಗೆ ರಾಮಬಾಣ
ಹಲವು ಶೀತ ಸಂಬಂಧಿ ರೋಗಗಳಿಗೆ ತುಳಸಿ ಮದ್ದು ರಾಮ ಬಾಣ. ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುತ್ತಿದ್ದರೆ ಶೀತ, ಕಫ, ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಕಿಡ್ನಿ ಕಲ್ಲು
ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ತುಳಸಿ ಎಲೆಯ ರಸದ ಜೊತೆಗೆ ಜೇನು ತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಒಳ್ಳೆಯದು. ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ.