ಆಲಿವ್ ಎಣ್ಣೆ ನೈಸರ್ಗಿಕವಾಗಿ ದೊರೆಯುವ ತೈಲವಾಗಿದೆ. ಇದು ಅತ್ಯಂತ ಪ್ರಯೋಜನಕಾರಿ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದಾಗಿದೆ. ಈ ಎಣ್ಣೆಯು ಕೋಮಲ ಚರ್ಮದ ಆರೈಕೆ ಮಾಡುತ್ತದೆ. ತ್ವಚೆಯ ಆರೈಕೆಯಲ್ಲಿ ಆಲೀವ್ ಎಣ್ಣೆ ತುಂಬಾ ಪರಿಣಾಮಕಾರಿಯಾದ ಸೌಂದರ್ಯವರ್ಧಕವಾಗಿದೆ. ಕೂದಲು, ತ್ವಚೆ ಆರೋಗ್ಯದ ಆರೈಕೆಗಾಗಿ ಈ ಎಣ್ಣೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ಎಣ್ಣೆ ಹೇಗೆಲ್ಲಾ ಪ್ರಯೋಜನಕಾರಿಯಾಗಿದೆ ಅನ್ನೋ ಮಾಹಿತಿ ಇಲ್ಲಿದೆ.
– ಸ್ನಾನದ ನಂತರ ಆಲೀವ್ ಎಣ್ಣೆಯನ್ನು ಮೈಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ ಇದರಿಂದ ಸ್ಕಿನ್ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ ಆಲೀವ್ ಎಣ್ಣೆಯಿಂದ ಮುಖದ ಮಸಾಜ್ ಮಾಡಿದರೆ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇದು ಸಹಾಯಕಾರಿಯಾಗಿದೆ.
– ಆಂಟಿ ಆಕ್ಸಿಡೆಂಟ್ ಗಳ ಪ್ರಮಾಣ ಹೇರಳವಾಗಿರುವುದರಿಂದ ನಿಮ್ಮ ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಲು ಇದು ಸಹಾಯಕಾರಿಯಾಗಿದೆ.
– ತ್ವಚೆ ಮಾತ್ರವಲ್ಲದೆ ಕೂದಲಿನ ಆರೈಕೆಗೂ ಈ ಎಣ್ಣೆ ಸಹಕಾರಿಯಾಗಿದೆ. ಒಣಗಿದ, ಹಾನಿಗೊಳಗಾದ ಕೂದಲನ್ನು ಹೊಂದಿದ್ದರೆ ಕೂದಲಿಗೆ ಬಿಸಿ ಆಲಿವ್ ಎಣ್ಣೆಯ ಮಸಾಜ್ ಮಾಡಿದರೆ ನಯವಾದ ಕೂದಲು ನಿಮ್ಮದಾಗುವುದು. ಮೊಟ್ಟೆಯ ಬಿಳಿ ಲೋಳೆ ಹಾಗೂ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ಕೂದಲ ಹೊಳಪು ಹೆಚ್ಚುತ್ತದೆ.
– ಹಸ್ತಗಳು ಒರಟಾಗಿದ್ದರೆ ಕೆಲವು ಹನಿ ಆಲಿವ್ ಎಣ್ಣೆಯನ್ನು ಹಚ್ಚಿಕೊಂಡು ನಯವಾಗಿ ಉಜ್ಜಿಕೊಳ್ಳುವ ಮೂಲಕ ಮೃದುವಾಗುತ್ತದೆ. ಕೈಗೆ ಕ್ಯೂಟಿಕಲ್ ಕ್ರೀಮ್ ಬಳಸುವ ಬದಲು ಆಲಿವ್ ಎಣ್ಣೆ ಹಾಕಿ ಮಸಾಜ್ ಮಾಡಿ. ಆಲಿವ್ ಆಯಿಲ್ ನಿಯಮಿತ ಬಳಕೆಯು ಕ್ಯೂಟಿಕಲ್ಗಳು ತೇವಾಂಶದಿಂದ ಇರುವುದು ಮತ್ತು ಉಗುರುಗಳು ಹೊಳೆಯುವಂತೆ ಮಾಡುತ್ತದೆ.
– ಒಣಗಿದ ತುಟಿಗಳಿಗೂ ಇದು ತುಂಬಾ ಪ್ರಯೋಜನಕಾರಿ. ಆಲಿವ್ ಎಣ್ಣೆಯನ್ನು ತುಟಿಗಳ ಮೇಲೆ ಮಸಾಜ್ ಮಾಡಿದರೆ ತುಟಿಗಳಿಗೆ ಮೃದುವಾದ ಸ್ಪರ್ಶ ನೀಡುವುದು. ಇದು ಚರ್ಮ, ತುಟಿಯನ್ನು ಡ್ರೈ ಆಗುವುದನ್ನು ತಡೆಯುತ್ತದೆ.
– ವಿಟಮಿನ್ ಇ, ಪಾಲಿಫೀನಾಲ್ಸ್ ಹಾಗೂ ಫ್ಲೇವನಾಯ್ಡ್ ಗಳು ಆಲಿವ್ ಎಣ್ಣೆಯಲ್ಲಿ ಇರುವುದರಿಂದ ಚರ್ಮದ ಹೊಳೆಯುವಿಕೆ ಮತ್ತು ಆರೋಗ್ಯಕ್ಕೆ ನೆರವು ನೀಡುವಲ್ಲಿ ಸಹಕಾರಿಯಾಗಿದೆ.
– ತಲೆಗೂದಲು ತಲೆಹೊಟ್ಟಿನಿಂದ ಕೂಡಿದ್ದರೆ ವಾರಕ್ಕೆ ಮೂರು ಬಾರಿಯಾದರೂ ಆಲಿವ್ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ನಂತರ ಶಾಂಪೂವಿನಿಂದ ತೊಳೆದರೆ ಉತ್ತಮ ಪರಿಣಾಮ ಪಡೆಯಬಹುದು.
– ಆಲಿವ್ ಎಣ್ಣೆಯನ್ನು ಆರೋಗ್ಯಕರ ಅಡುಗೆ ಎಣ್ಣೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಎಣ್ಣೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
– ಆಲಿವ್ ಎಣ್ಣೆಯಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಸಮೃದ್ಧವಾಗಿದ್ದು, ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ.
– ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಆಲಿವ್ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಬಳಕೆ ಮಾಡಿದರೆ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಬಹುದು.
– ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಲಿವ್ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಆಲಿವ್ ಎಣ್ಣೆಯಲ್ಲಿ ಬಹಳ ಕಡಿಮೆ ಪ್ರಮಾಣದ ಕೊಬ್ಬು ಇದ್ದು, ಇದು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ.
– ಮಧುಮೇಹ ನಿಯಂತ್ರಣಕ್ಕೆ ಆಲಿವ್ ಎಣ್ಣೆಯನ್ನು ಬಳಸುವುದು ತುಂಬಾ ಪ್ರಯೋಜನಕಾರಿ. ಆಲಿವ್ ಎಣ್ಣೆಯು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೆಲಸ ಮಾಡುತ್ತದೆ.