ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ.
* ಬಾರ್ಲಿಯಲ್ಲಿರುವ ಬೀಟಾ ಗ್ಲೂಕೋನ್ ಅಂಶ ದೇಹದೊಳಗಿನ ವಿಷಾಂಶ ಹೊರಹಾಕಲು ನೆರವಾಗುತ್ತದೆ.
* ಮೂತ್ರದ ಸೋಂಕು ಹೋಗುವವರೆಗೂ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿಯುವುದು ಒಳ್ಳೆಯದು.
* ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಉಷ್ಣದಿಂದ ಆಗುವ ಸಮಸ್ಯೆಗಳಿಗೆ ಬಾರ್ಲಿ ನೀರು ಒಳ್ಳೆಯದು.
* ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆ ಇದ್ದರೂ ಬಾರ್ಲಿ ನೀರು ಸೇವಿಸಬಹುದು.
* ದೇಹದಲ್ಲಿರುವ ಬೇಡದ ಕೊಬ್ಬಿನಂಶ ಕರಗಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೂ ಉತ್ತಮ.
* ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿಧಾನವಾಗಿ ಕರಗುತ್ತದೆ. ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.
* ಅತಿಸಾರದಿಂದ ಬಳಲುತ್ತಿರುವವರಿಗೆ ತಕ್ಷಣವೇ ಒಂದು ಲೋಟ ಬಾರ್ಲಿ ನೀರನ್ನು ಕುಡಿಸುವ ಮೂಲಕ ನಿಲ್ಲಿಸಬಹುದು.
* ಬಾರ್ಲಿಯ ನೀರನ್ನು ಸೋಸಿ ಮುಖ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.