alex Certify ಮಕ್ಕಳು ಬಯಲಲ್ಲಿ ಆಡುವುದರಿಂದ ಎಷ್ಟೆಲ್ಲಾʼಲಾಭʼವಿದೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು ಬಯಲಲ್ಲಿ ಆಡುವುದರಿಂದ ಎಷ್ಟೆಲ್ಲಾʼಲಾಭʼವಿದೆ ಗೊತ್ತಾ…..?

ನಗರಗಳಲ್ಲಿ ಮಕ್ಕಳಿಗೆ ಹೊರಗಡೆ ಆಡುವ ಅವಕಾಶವೇ ಕಡಿಮೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸ, ಟ್ರಾಫಿಕ್ ಕಿರಿಕಿರಿ ಇವುಗಳೆಲ್ಲದರಿಂದ ಮಕ್ಕಳಿಗೆ ಆಡುವುದಕ್ಕೆ ಸಮಯವೂ ಇಲ್ಲ. ಸರಿಯಾದ ವ್ಯವಸ್ಥೆಯೂ ಇಲ್ಲ. ಟಿವಿ, ಮೊಬೈಲ್ ಗಳೇ ಅವರ ಪ್ರಪಂಚವಾಗಿರುತ್ತದೆ.

ಇದು ಬೆಳೆಯುವ ಮಕ್ಕಳಿಗೆ ಒಳ್ಳೆಯದಲ್ಲ. ಮಕ್ಕಳು ಹೊರಗಡೆ ಆಡುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ.

* ಅಧ್ಯಯನವೊಂದರ ಪ್ರಕಾರ ಮಕ್ಕಳು ಮನೆಯ ಒಳಗಡೆ ಆಡುವುದಕ್ಕಿಂತ ಹೊರಗಡೆ ಆಡುವುದಿಂದ ಅವರ ಕಣ್ಣಿನ ದೃಷ್ಟಿಯು ಸುಧಾರಿಸುತ್ತದೆಯಂತೆ.

*ಇನ್ನು ಸಮಾಜದವರೊಂದಿಗೆ ಹೇಗೆ ಬೆರೆಯಬೇಕು ಎಂಬುದನ್ನು ಮನೆಯ ಹೊರಗಡೆ ಆಡುವುದರಿಂದ ಮಕ್ಕಳಿಗೆ ತಿಳಿಯುತ್ತದೆ.

*ಹಸಿರಿನ ಮಧ್ಯೆ ಮಕ್ಕಳು ಆಡುವುದರಿಂದ ಅವರಲ್ಲಿ ಎಡಿಎಚ್ ಡಿ ಲಕ್ಷಣಗಳು ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ, ಪ್ರಕೃತಿಯ ಮಧ್ಯೆ ಮಕ್ಕಳು ಬೆರೆಯುವಿಕೆಯಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಒರಟುತನ ಕಡಿಮೆಯಾಗುತ್ತದೆ.

* ಮನೆಯ ಹೊರಗಡೆಯ ಆಟ ಅವರಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆಯಂತೆ. ಓದು, ಪರೀಕ್ಷೆಗಳ ಒತ್ತಡದಲ್ಲಿರುವ ಮಕ್ಕಳು ಪ್ರಕೃತಿಯ ಮಧ್ಯೆ ಅಥವಾ ಆಟದ ಮೈದಾನದಲ್ಲಿ ಸಮಯವನ್ನು ಕಳೆಯುವುದರಿಂದ ಅವರಲ್ಲಿನ ಒತ್ತಡ ಕಡಿಮೆಯಾಗಿ ಖುಷಿಯಿಂದ ಇರುತ್ತಾರೆ.

*ಹೆಚ್ಚಿನ ಮಕ್ಕಳು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಮುಂಜಾನೆ ಹೊತ್ತು ಹಾಗೂ ಮುಸ್ಸಂಜೆ ಸೂರ್ಯನ ಬೆಳಕಿನಲ್ಲಿ ಆಟವಾಡುವುದರಿಂದ ವಿಟಮಿನ್ ಡಿ ಸಿಗುತ್ತದೆ. ಇದರಿಂದ ಮಕ್ಕಳಿಗೆ ಮೂಳೆಯ ಸಮಸ್ಯೆ, ಹೃದಯದ ಸಮಸ್ಯೆ, ಮಧುಮೇಹ ಬಾರದಂತೆ ತಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...