alex Certify ನಿಮಗೆ ಗೊತ್ತಾ ʼಈರುಳ್ಳಿʼಯ ಹತ್ತು ಹಲವು ಉಪಯೋಗಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಗೊತ್ತಾ ʼಈರುಳ್ಳಿʼಯ ಹತ್ತು ಹಲವು ಉಪಯೋಗಗಳು

ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶ ಹೆಚ್ಚಿಸುವ ಈರುಳ್ಳಿಯಿಂದ ಇನ್ನಿತರ ಅನೇಕ ಉಪಯೋಗಗಳಿವೆ. ಇದನ್ನು ಅಡುಗೆ ಮನೆಯ ವಿವಿಧ ಪರಿಕರಗಳ ಸ್ವಚ್ಛತೆಗೂ ಬಳಸಬಹುದು. ಇಂಥ ಕೆಲವು ಕ್ಲೀನಿಂಗ್‌ ವಿಧಾನ ಇಲ್ಲಿದೆ.

* ತುಕ್ಕು ಹಿಡಿದಿರುವ ಚಾಕುಗಳಿಂದ ದೊಡ್ಡ ಈರುಳ್ಳಿಯನ್ನು ಹೆಚ್ಚಿದರೆ ಅದರಲ್ಲಿರುವ ತುಕ್ಕು ತಕ್ಷಣಕ್ಕೆ ಹೋಗುತ್ತದೆ.

* ಮನೆಯಲ್ಲಿ ಹೊಸ ಪೇಂಟ್‌ನ ವಾಸನೆ ಬರುತ್ತಿದ್ದರೆ, ಈರುಳ್ಳಿಯ ಸ್ಲೈಸ್‌ಗಳಿಗೆ ಸ್ವಲ್ಪ ನೀರು ಚಿಮುಕಿಸಿ ರಾತ್ರಿಯಿಡೀ ಇಟ್ಟರೆ ಅದು ವಾಸನೆಯನ್ನು ಹೀರಿಕೊಳ್ಳುತ್ತದೆ.

* ಕೊಳೆಯಾಗಿರುವ ಗ್ರಿಲ್‌ ಅನ್ನು ಈರುಳ್ಳಿಯ ಹೋಳುಗಳಿಂದ ಚೆನ್ನಾಗಿ ಸ್ವಚ್ಛಗೊಳಿಸಬಹುದು.

* ಹೊಳಪು ಕಳೆದುಕೊಂಡಿರುವ ಲೋಹದ ಪಾತ್ರೆಗಳನ್ನು ಈರುಳ್ಳಿ ನೆನೆಸಿದ ನೀರಿನಿಂದ ಒರೆಸಿದರೆ ಪಾತ್ರೆಗೆ ಹೊಸ ಹೊಳಪು ಬರುತ್ತದೆ.

* ಅಡುಗೆ ಮನೆಯಲ್ಲಿ ಸೀದು ಹೋದ ಅನ್ನದ ವಾಸನೆ ಬರುತ್ತಿದ್ದರೆ, ಸ್ಟವ್‌ ಪಕ್ಕ ಅರ್ಧ ಹೋಳು ಈರುಳ್ಳಿ ಇಡಿ. ಇದು ವಾಸನೆಯನ್ನು ಹೀರಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...