alex Certify ದಿನಕ್ಕೊಂದು ʼವಾಲ್ ನಟ್ʼ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೊಂದು ʼವಾಲ್ ನಟ್ʼ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ….?

What Happens To Your Body When You Eat Walnuts | Eat This Not Thatಈಗಿನ ಕಾಲದಲ್ಲಿ ಯಾವುದೇ ಆಹಾರವು ನಮಗೆ ಪರಿಪೂರ್ಣವಾದ ಶಕ್ತಿಯನ್ನು ಕೊಡುವುದಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಟ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಈ ವಾಲ್ ನಟ್ ನಲ್ಲಿರುವ ಅಂಶಗಳು ನಮ್ಮ ಹೃದಯ ಮತ್ತು ಮೆದುಳನ್ನು ಆರೋಗ್ಯವಾಗಿರಿಸುತ್ತದೆ.

ವಾಲ್ ನಟ್ ನಲ್ಲಿ ಪಾಲಿಫಿನಾಲ್ ಇರುವುದರಿಂದ ಇದು ನಮ್ಮ ಮೆದುಳಿನ ನರಕೋಶಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.

ಹಾಗೇ ಪ್ರತಿ ದಿನ ಇದನ್ನು ತಿನ್ನುವುದರಿಂದ ಮೆದುಳಿನ ಶಕ್ತಿ ಕೂಡ ಹೆಚ್ಚಿಸುತ್ತದೆ. ಹಾಗೇ ನಮ್ಮ ಚಯಾಪಚಯ ಕ್ರೀಯೆ ಕೂಡ ಹೆಚ್ಚಿ ದೇಹದಲ್ಲಿರುವ ಬೇಡದ ಕೊಬ್ಬಿನಾಂಶವನ್ನು ಕರಗಿಸುತ್ತದೆ.

ವಾಲ್ ನಟ್ ನಲ್ಲಿ ವಿಟಮಿನ್ ಬಿ1, 2, 3, 6 ಮತ್ತು ವಿಟಮಿನ್ ಇ ಆಗರವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಹಾಗೇ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ. ಹಾಗೇ ಗಂಡಸರಲ್ಲಿ ವಿರ್ಯವೃದ್ಧಿಯಾಗುವಂತೆ ಮಾಡುವುದರ ಜತೆಗೆ ಮಹಿಳೆಯರಲ್ಲಿನ ಋತುಚಕ್ರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...