ಸಕ್ಕರೆ ಹೆಚ್ಚಾಗಿ ತಿನ್ನುತ್ತೀರಾ…..? ಜೋಕೆ…!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ ಅತಿಯಾದ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಇದು ಬುದ್ಧಿಮಾಂದ್ಯತೆ ಮತ್ತು ಖಿನ್ನತೆಗೆ ಕಾರಣವಾಗಬಹುದು.

ವರದಿ ಪ್ರಕಾರ, ಪ್ರತಿ ಭಾರತೀಯ ವರ್ಷಕ್ಕೆ ಸರಾಸರಿ 20 ಕಿಲೋ ಸಕ್ಕರೆ ಸೇವಿಸುತ್ತಾನೆ. ಇದು ಮಾದಕ ವ್ಯಸನದಷ್ಟೇ ಕೆಟ್ಟದು. ಸಾಮಾನ್ಯ ಕಾಯಿಲೆಗಳಲ್ಲಿ ಒಂದಾದ ಟೈಪ್ -2 ಡಯಾಬಿಟಿಸ್ ಗೆ ಅತಿಯಾದ ಸಕ್ಕರೆ ಸೇವನೆಯೇ ಕಾರಣ.

ಮಿತಿಗಿಂತ ಜಾಸ್ತಿ ಸಕ್ಕರೆ ತಿನ್ನುತ್ತಿರುವವರ ಮೇದೋಜೀರಕಾಂಗ ಅಗತ್ಯಕ್ಕಿಂತ ಹೆಚ್ಚು ಇನ್ಸುಲಿನ್ಗಳ ಉತ್ಪತ್ತಿ ಮಾಡುತ್ತವೆ. ಇದರಿಂದಾಗಿ ದೇಹದ ಜೀವಕೋಶಗಳಲ್ಲಿ ಗ್ಲುಕೋಸ್ ಅನ್ನು ಸುಲಭವಾಗಿ ಸಂಗ್ರಹಿಸಲಾಗುವುದಿಲ್ಲ. ಹಾಗಾಗಿ ರಕ್ತದ ಹರಿವಿನಲ್ಲಿ ಸಕ್ಕರೆ ಅಂಶ ಸೇರಿ, ರಕ್ತದಲ್ಲಿನ ಒತ್ತಡ ಹೆಚ್ಚಾಗುತ್ತದೆ.

ಭಾರತದಲ್ಲಿ ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ 2045 ರ ವೇಳೆಗೆ 7.2 ಕೋಟಿಯಿಂದ 15 ಕೋಟಿಗೆ ಹೆಚ್ಚಾಗುವ ಸಾಧ್ಯತೆಯಿದೆ.

ತಜ್ಞರ ಪ್ರಕಾರ, ನಾವು ಸಕ್ಕರೆ ಸೇವಿಸಿದಾಗ ನಮ್ಮ ಮೆದುಳು ಜಾಸ್ತಿ ಪ್ರಮಾಣದ ಡೋಪಮೈನನ್ನು, ಅಂದರೆ ಮನಸಿಗೆ ಉಲ್ಲಾಸ ನೀಡುವಂತಹ ಹಾರ್ಮೋನನ್ನು ಉತ್ಪಾದಿಸುತ್ತದೆ. ಸಕ್ಕರೆ, ಅತಿಸೂಕ್ಷ್ಮ ಅಂಗವಾದ ಮೆದುಳು ಹೆಚ್ಚು ಡೋಪಮೈನ್ ಬಿಡಲು ಕಾರಣವಾಗುತ್ತದೆ. ಇದರಿಂದಾಗಿ ಮೆದುಳಿನ ಸಂವೇದನಾಶೀಲತೆ ಕಡಿಮೆಯಾಗಿ ಬುದ್ದಿಮಾಂದ್ಯತೆಗೆ ಕಾರಣವಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read