ಕೊರೋನಾ ಬಂದ ಬಳಿಕ ಕಷ್ಟಗಳೂ ಹೆಚ್ಚಿವೆ. ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಸಂಬಳ ಸಿಗುವ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಖಿನ್ನತೆಯ ಪ್ರಮಾಣವೂ ಹೆಚ್ಚಿದೆ. ಇದರಿಂದ ಹೊರಬರುವ ಕೆಲವು ಗಿಡಮೂಲಿಕೆಗಳ ಬಗ್ಗೆ ತಿಳಿಯೋಣ.
ಅಶ್ವಗಂಧದಲ್ಲಿ ನಮ್ಮ ಮನಸ್ಸಿನ ಖಿನ್ನತೆಯನ್ನು ದೂರ ಮಾಡಿ ಮನಸ್ಸನ್ನು ಫ್ರೆಶ್ ಮಾಡುವ ಗುಣವಿದೆ. ನಿತ್ಯ ಕಷಾಯ ರೂಪದಲ್ಲಿ ಅಶ್ವಗಂಧದ ಪುಡಿಯನ್ನು ಸೇವನೆ ಮಾಡುವ ಮೂಲಕ ಖಿನ್ನತೆಯಿಂದ ದೂರವಿರಬಹುದು.
ನೆನಪಿನ ಶಕ್ತಿ ಹೆಚ್ಚಿಸಲು ಅತ್ಯುತ್ತಮ ಎನ್ನಲಾದ ಬ್ರಾಹ್ಮೀ ಎಲೆ ಮೆದುಳಿನ ಮೇಲೆ ಬೀರುವ ಪ್ರಭಾವ ಅಪಾರವಾದುದು. ಇದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ.
ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಪುದೀನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಮನಸ್ಸು ಪ್ರಶಾಂತಗೊಳ್ಳುತ್ತದೆ. ಮಾನಸಿಕ ಅಸ್ವಸ್ಥತೆ ಕಡಿಮೆಯಾಗುತ್ತದೆ. ಮನಸ್ಸಿಗೆ ಬೇಸರವಾಗಿದೆ ಎನಿಸಿದಾಗ ನಾಲ್ಕಾರು ಪುದೀನಾ ಎಲೆಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿದು ನೋಡಿ. ನಿಮ್ಮ ಸಮಸ್ಯೆಗೆ ತಕ್ಷಣ ಪರಿಹಾರ ಲಭಿಸುತ್ತದೆ.