ಕೂದಲಿನ ಆರೋಗ್ಯ ವೃದ್ಧಿಸಿ ಸೊಂಪಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ

ತಲೆ ತುಂಬಾ ಮುಡಿ ಇರಬೇಕೆಂಬುದು ಬಹುತೇಕ ಎಲ್ಲರ ಮಹಿಳೆಯರ ಹೆಬ್ಬಯಕೆ. ಹೊರಗಿನಿಂದ ವಸ್ತುಗಳನ್ನು ತರದೆ ಅಡುಗೆ ಮನೆಯ ಪದಾರ್ಥಗಳಿಂದಲೇ ನಿಮ್ಮ ಕೂದಲಿನ ಆರೋಗ್ಯವನ್ನು ವೃದ್ಧಿಸಬಹುದು. ಹೇಗೆಂದಿರಾ…

ಪರಿಶುದ್ಧ ತೆಂಗಿನ ಎಣ್ಣೆ: ಸ್ನಾನಕ್ಕೆ ೧೫ ನಿಮಿಷಗಳ ಮೊದಲು ತೆಂಗಿನೆಣ್ಣೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ. ದಾಸವಾಳದ ಎಲೆ, ಬೇವಿನ ಎಲೆಯನ್ನು ಸೇರಿಸಿ ತೆಂಗಿನೆಣ್ಣೆ ಬಿಸಿ ಮಾಡಿಕೊಂಡಿರಿ. ಒಮ್ಮೆ ತಯಾರಿಸಿದರೆ ಇದು ೬ ತಿಂಗಳವರೆಗೆ ಕೆಡದು.
ಸ್ನಾನಕ್ಕೆ ೨೫ ನಿಮಿಷಗಳ ಮೊದಲು ಎಣ್ಣೆಗೆ ನಿಂಬೆರಸ ಬೆರೆಸಿ ಹಚ್ಚಿಕೊಳ್ಳಿ. ಹದವಾದ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ತಲೆಯ ಹೊಟ್ಟನ್ನು ಇದು ನಿವಾರಿಸುತ್ತದೆ.

ಮನೆಯ ಹಿತ್ತಲಲ್ಲಿ ಅಲೋವೇರಾ ಇದ್ದರೆ ನಿಮ್ಮ ಕೆಲಸ ಇನ್ನೂ ಸಲೀಸು. ವಾರಕ್ಕೊಮ್ಮೆ ಇದರ ರಸವನ್ನು ಹಿಂಡಿ ತಲೆಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗಿಯೂ, ಉದ್ದವಾಗಿಯೂ ಬೆಳೆಯುತ್ತದೆ.

ನೀರುಳ್ಳಿ ರಸ ಕೂದಲು ಬೆಳೆಯಲು ಸಹಕಾರಿ ಎಂಬುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಇದು ಪೋಷಕಾಂಶದ ಜೊತೆಗೆ ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ. ಇದನ್ನು ಹಚ್ಚಿ ೧೫ ನಿಮಿಷಗಳ ಬಳಿಕ ಸ್ನಾನ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read