alex Certify ಕೂದಲು ಉದುರುವುದನ್ನು ತಡೆಯಲು ರಾತ್ರಿ ಮಲಗುವ ಮುನ್ನ ಮಾಡಿ ಈ 5 ಮುಖ್ಯ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಉದುರುವುದನ್ನು ತಡೆಯಲು ರಾತ್ರಿ ಮಲಗುವ ಮುನ್ನ ಮಾಡಿ ಈ 5 ಮುಖ್ಯ ಕೆಲಸ…!

ಉದ್ದ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಪ್ರತಿಯೊಬ್ಬ ಮಹಿಳೆಯರ ಕನಸು. ಆದರೆ ನಮ್ಮ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಕೂದಲು ಉದುರುವಿಕೆ ಸಾಮಾನ್ಯವಾಗಿಬಿಟ್ಟಿದೆ. ಕೂದಲು ಉದುರುವುದನ್ನು ತಡೆಯಲು ಕೆಲವೊಂದು ಸರಳ ಸಲಹೆಗಳು ಇಲ್ಲಿವೆ.

ತಜ್ಞರ ಪ್ರಕಾರ ಕೂದಲು ಉದುರುವಿಕೆಗೆ ಜೆನೆಟಿಕ್ಸ್, ಮಾಲಿನ್ಯ, ಹೀಟಿಂಗ್‌ ಉಪಕರಣಗಳು, ಪೌಷ್ಟಿಕಾಂಶದ ಕೊರತೆ, ರಾಸಾಯನಿಕ ಉತ್ಪನ್ನಗಳು ಇವೆಲ್ಲವೂ ಕಾರಣ. ಕೂದಲು ಉದುರುವುದರ ಜೊತೆಗೆ ಅವುಗಳ ಬೆಳವಣಿಗೆಯೂ ನಿಲ್ಲುತ್ತದೆ. ಕೂದಲನ್ನು ಬಲಪಡಿಸಲು ನೀವು ಬಯಸಿದರೆ ಈ 5 ಸಲಹೆಗಳನ್ನು ಅನುಸರಿಸಿ.

ಲಿಕ್ವಿಡ್‌ ಸೀರಮ್‌ 

ತಜ್ಞರ ಪ್ರಕಾರ ಕೂದಲು ಶುಷ್ಕ ಮತ್ತು ಫ್ರೀಝ್‌ ಆಗಿರುವುದರಿಂದ ಅನೇಕ ಬಾರಿ ಒಡೆಯಲು ಪ್ರಾರಂಭಿಸುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಹೇರ್ ಸೀರಮ್ ಬಳಸಿ. ಲಿಕ್ವಿಡ್ ಸೀರಮ್ ಕೂದಲಿನ ಸಿಕ್ಕನ್ನು ಹೋಗಲಾಡಿಸಿ ಕೂದಲನ್ನು ಮೃದುವಾಗಿಸುತ್ತದೆ.

ಮಲಗುವ ಮುನ್ನ ಕೂದಲು ಬಾಚಿಕೊಳ್ಳಿ

ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲನ್ನು ಬಾಚಿಕೊಳ್ಳಿ. ಇದರಿಂದ ಅದು ಜಟಿಲವಾಗುವುದಿಲ್ಲ, ಸಿಕ್ಕಾಗುವುದಿಲ್ಲ. ರಾತ್ರಿ  ಚೆನ್ನಾಗಿ ಬಾಚಿಕೊಳ್ಳುವುದರಿಂದ ಕೂದಲಿನ ಬೇರುಗಳಲ್ಲಿ ನೈಸರ್ಗಿಕ ಹೊಳಪನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಕೂದಲು ಒಣಗುವುದಿಲ್ಲ.

ಒದ್ದೆ ಕೂದಲಿನೊಂದಿಗೆ ಮಲಗಬೇಡಿ

ಹೆಚ್ಚಿನ ಜನರು ರಾತ್ರಿ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಒಣಗಿಸದೆ ಹಾಗೇ ಮಲಗುತ್ತಾರೆ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಹೀಗೆ ಮಾಡುತ್ತಿದ್ದರೆ ತಕ್ಷಣ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.

ಕೂದಲು ಬಿಚ್ಚಿಕೊಂಡು ಮಲಗುವುದು

ಹೆಚ್ಚಿನ ಮಹಿಳೆಯರು ಕೂದಲನ್ನು ಬಿಚ್ಚಿಕೊಂಡು ಮಲಗುತ್ತಾರೆ. ಜಡೆ ಹೆಣೆದುಕೊಳ್ಳದೇ, ರಬ್ಬರ್‌ ಬ್ಯಾಂಡ್‌ನಿಂದ ಕೂದಲನ್ನು ಬಂಧಿಸದೇ ಹಾಗೇ ಮಲಗುತ್ತಾರೆ. ಇದರಿಂದಾಗಿ ಕೂದಲಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿಮಗೆ ಕೂದಲು ಉದುರುವ ಸಮಸ್ಯೆ ಇದ್ದರೆ, ಮಲಗುವಾಗ ಜಡೆ ಹೆಣೆದುಕೊಳ್ಳಿ. ಇದರಿಂದ ಕೂದಲು ಸಿಕ್ಕಾಗುವುದಿಲ್ಲ ಜೊತೆಗೆ ಒಡೆಯುವುದನ್ನೂ ತಪ್ಪಿಸಬಹುದು.

ಡೀಪ್‌ ಕಂಡೀಷನಿಂಗ್

ಆರೋಗ್ಯಕರ ಕೂದಲಿಗೆ ಡೀಪ್‌ ಕಂಡೀಷನಿಂಗ್ ಬಹಳ ಮುಖ್ಯ. ಇದಕ್ಕಾಗಿ ಬಾದಾಮಿ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಿ. ಇದಲ್ಲದೆ ನೀವು ವಿಟಮಿನ್-ಇ ಕ್ಯಾಪ್ಸುಲ್‌ಗಳನ್ನು ಸಹ ತೆಗೆದುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...