ರಕ್ಷಾ ಬಂಧನಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಸಹೋದರಿಯರು ರಾಖಿ ಖರೀದಿ ಮಾಡಿದ್ರೆ, ಸಹೋದರರು ಉಡುಗೊರೆ ಖರೀದಿಯಲ್ಲಿ ಬ್ಯುಸಿಯಿದ್ದಾರೆ. ಆದ್ರೆ ರಕ್ಷಾ ಬಂಧನದ ದಿನ, ಕೆಲ ವಸ್ತುಗಳನ್ನು ಸಹೋದರಿಯರಿಗೆ ಉಡುಗೊರೆ ನೀಡಬಾರದು.
ರಕ್ಷಾ ಬಂಧನದ ದಿನ, ಸಹೋದರಿಯರಿಗೆ ಕೆಲವರು ಫೋಟೋ ಫ್ರೇಮ್ ಅಥವಾ ಗಾಜಿನಿಂದ ಮಾಡಿದ ಉಡುಗೊರೆಯನ್ನು ನೀಡುತ್ತಾರೆ. ಸನಾತನ ಧರ್ಮದ ಪ್ರಕಾರ, ಹಾಗೆ ಮಾಡುವುದು ಸರಿಯಲ್ಲ. ಇದು ಅಶುಭ.
ರಕ್ಷಾಬಂಧನದಂದು ಸಹೋದರಿಯರಿಗೆ ಕನ್ನಡಿ ಸೇರಿ ಯಾವುದೇ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಬೇಡಿ. ಹಾಗೆ ಚಾಕು, ಆಯುಧಗಳನ್ನು ಉಡುಗೊರೆಯಾಗಿ ನೀಡಬಾರದು.
ಹಾಗೆ ಕರವಸ್ತ್ರವನ್ನು ಉಡುಗೊರೆಯಾಗಿ ನೀಡಬೇಡಿ. ಕರವಸ್ತ್ರ, ವಿದಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಉಡುಗೊರೆಯಾಗಿ ಕರವಸ್ತ್ರ ಪಡೆಯಬೇಡಿ. ಹಾಗೆ ಕೊಡಬೇಡಿ.
ರಕ್ಷಾ ಬಂಧನದಲ್ಲಿ, ಸಹೋದರಿಯರಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಇದು ಶುಭಕರ. ಆದರೆ ಸಹೋದರಿಯರಿಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬೇಡಿ. ಕಪ್ಪು ಬಣ್ಣ ದುಃಖ, ನೋವು ಮತ್ತು ತೊಂದರೆಗಳ ಸಂಕೇತವೆಂದು ಪರಿಗಣಿಸಲಾಗಿದೆ.
ರಕ್ಷಾಬಂಧನದಂದು ಅನೇಕ ಜನರು ತಮ್ಮ ಸಹೋದರಿಯರಿಗೆ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಗಡಿಯಾರವು ಜೀವನದ ಪ್ರಗತಿಗೆ ಅಡ್ಡಿ ಮಾಡುತ್ತದೆ.
ಹುಡುಗಿಯರಿಗೆ ಚಪ್ಪಲಿ, ಶೂ ಮೇಲೆ ಹೆಚ್ಚಿನ ಪ್ರೀತಿಯಿರುತ್ತದೆ. ಆದ್ರೆ ಎಷ್ಟೇ ಪ್ರೀತಿಯಿದ್ರೂ ರಕ್ಷಾ ಬಂಧನದ ದಿನ ಇದನ್ನು ಉಡುಗೊರೆಯಾಗಿ ನೀಡಬೇಡಿ.