
ಯಾದಗಿರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಕಾಡಸಿದ್ದೇಶ್ವರ ಮಠದ ನೊಣವಿನಕೆರೆ ಸೊಮ್ಮೆಕಟ್ಟೆ ಶ್ರೀ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಯಾದಗಿರಿ ಸಮೀಪದ ಶ್ರೀ ಕ್ಷೇತ್ರ ಅಬ್ಬೆತುಮಕೂರಿನಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತವೆಂದು ಹೇಳಿದ್ದಾರೆ.
ಶಿವಕುಮಾರ್ ಸಿಎಂ ಆಗಬೇಕೆಂದು ರೈತರು, ಸದ್ಭಕ್ತರು, ವರ್ತಕರು ಎಲ್ಲರಿಗೂ ಆಸೆ ಇದೆ. ಅವರು ಸಿಎಂ ಆಗಲು ಯೋಗ್ಯ ವ್ಯಕ್ತಿ. ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಸಂಕಲ್ಪವಿದೆ. ನಮ್ಮ ಶ್ರೀಮಠದ ಆಶೀರ್ವಾದವೂ ಶಿವಕುಮಾರ್ ಮೇಲಿದೆ ಎಂದು ಹೇಳಿದ್ದಾರೆ.