ಸಿಎಂ ಸಿದ್ಧರಾಮಯ್ಯ, ಯತೀಂದ್ರ ವಿರುದ್ಧ ಡಿಸಿಎಂ ಡಿಕೆಶಿ ಸಿಡಿ ಅಸ್ತ್ರ: ರಾಜೂಗೌಡ ಸ್ಪೋಟಕ ಹೇಳಿಕೆ

ಸುರಪುರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೂಗೌಡ ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್, ಸಿಡಿ ವಿಶ್ವವಿದ್ಯಾಲಯ ತೆರೆದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಒಂಥರ 24*7 ರಾಜಕೀಯ ಮಾಡುವವರು. ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಅವರಿಗೆ ಗೊತ್ತಿದೆ. ಕೆಲವರಿಗೆ ಬೆದರಿಕೆಯ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ. ಸಮಯ ಬಂದಾಗ ಎದುರಾಳಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ. ಈಗ ಪ್ರಜ್ವಲ್, ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧವೂ ಇದೇ ಅಸ್ತ್ರವನ್ನು ಪ್ರಯೋಗಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ರಾಜೂಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಅಣ್ಣನಿಗೆ ಸಿಎಂ ಆಗಬೇಕಿದೆ. ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಇಳಿಸಬೇಕು. ಹೀಗಾಗಿ ಡಿಕೆ ಏನು ಬೇಕಾದರೂ ಮಾಡೋಕೆ ಸಿದ್ದರಿದ್ದಾರೆ. ಬೇಕಾದ್ರೆ ಯತೀಂದ್ರ ಅವರದ್ದು ಒಂದು ಸಿಡಿ ಬಿಡುತ್ತಾರೆ. ಭ್ರಷ್ಟಾಚಾರದ್ದು ಅಥವಾ ಯಾವುದೋ ಒಂದು ಸಿಡಿ ಬಿಡುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರೇ ಅಂತವರ ಜೊತೆ ಓಡಾಡಬೇಡಿ. ಡಿ.ಕೆ. ಶಿವಕುಮಾರ್ ಗೆ ನಿಮ್ಮ ಕುರ್ಚಿಯ ಮೇಲೆ ಕಣ್ಣು ಇದೆ ಎಂದು ರಾಜೂಗೌಡ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read