ಸೋಯಾ ಚಾಪ್ ಪ್ರಿಯರಿಗೆ ಇದು ಶಾಕಿಂಗ್ ದೃಶ್ಯ. ಮೋನಿಕಾ ಜಸುಜಾ ಎಂಬುವವರು ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಸೋಯಾ ಚಾಪ್ ತಯಾರಿಸುವ ದೃಶ್ಯ ಅಸಹ್ಯ ಹುಟ್ಟಿಸಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ಭಯಾನಕ ವೀಡಿಯೊಗೆ ನೆಟ್ಟಿಗರು ಆಕ್ರೋಶ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯೊಬ್ಬ ಕೈಗವಸುಗಳಿಲ್ಲದೆ ತನ್ನ ಕೈಯಿಂದ ಸೋಯಾ ಚಾಪ್ ಅನ್ನು ತಯಾರಿಸಿದ್ದು ಅದನ್ನು ನೀರಿನಲ್ಲಿ ಮಿಕ್ಸ್ ಮಾಡುವ, ಪೇಸ್ಟ್ ಮಾಡುವ ಹಂತದಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು ಸೋಯಾ ಚಾಪ್ ಗುಣಮಟ್ಟದ ಬಗ್ಗೆ ಅಸಹ್ಯ ಹುಟ್ಟಿಸಿದೆ.
ಸೋಯಾ ಚಾಪ್ ತಯಾರಿಕೆ ವೇಳೆ ನೈರ್ಮಲ್ಯ ಕಾಪಾಡುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಸಡ್ಡೆ ತೋರಿದ್ದು, ಇಂತಹ ಕೊಳಕು ವಾತಾವರಣ ಮತ್ತು ಕ್ರಮಗಳ ಬಗ್ಗೆ ಆತಂಕ ಹುಟ್ಟಿಸಿದೆ.
ಸೋಯಾ ಚಾಪ್ ಅನ್ನು ಹೀಗೆ ತಯಾರಿಸಲಾಗಿದೆ. ಇನ್ನೆಂದೂ ಸೋಯಾ ಚಾಪ್ ತಿನ್ನುವುದಿಲ್ಲ ಎಂದು ಮೋನಿಕಾ ಜಸುಜಾ ವೀಡಿಯೊ ಹಂಚಿಕೊಂಡು ಹೇಳಿದ್ದಾರೆ.
https://twitter.com/jasuja/status/1785344110418636891?ref_src=twsrc%5Etfw%7Ctwcamp%5Etweetembed%7Ctwterm%5E1785344110418636891%7Ctwgr%5E4615f9de940aef1fa3d6391786e2428514f4388b%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideodisgustingdisturbingfootagerevealsunhygienicsoyachaapproductionprocesswatch-newsid-n604970886