ಇತ್ತೀಚಿಗಷ್ಟೇ ತನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದ ಪ್ರತೀಕ್ ಅಭಿನಯದ ‘ಧ್ರುವತಾರೆ’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಪ್ರತೀಕ್ ನಟಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮೌಲ್ಯ ನಾಯಕಿಯಾಗಿ ಅಭಿನಯಿಸಿದ್ದು,ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಮೂಗ್ ಸುರೇಶ್, ಪಿಡಿ ಸತೀಶ್ ಚಂದ್ರ, ಪ್ರಭಾವತಿ, ಸಮಯ, ಸಂಗೀತ ನಾರಾಯಣ್ ಉಳಿದ ತಾರಾ ಬಳಗದಲ್ಲಿದ್ದಾರೆ. ಜಿಪಿ ಸ್ಟುಡಿಯೋ ಫಿಲಂ ಸಂಸ್ಥೆ ನಿರ್ಮಾಣ ಮಾಡಿದ್ದು, ಪ್ರತೀಕ್ ಸಂಕಲನ, ಸೋನು ಗೌಡ ವೇಷಭೂಷಣ, ಜೀಚನ್ ಛಾಯಾಗ್ರಹಣವಿದೆ. ಇನ್ನುಳಿದಂತೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/A2MusicSouth/status/1829818703128490392