ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ ಯಲ್ಲಿ ಶೇ. 50 ಅಂಕದೊಂದಿಗೆ ಮತ್ತು ಆಂಗ್ಲಭಾಷೆ ವಿಷಯದಲ್ಲಿ ಶೇ. 50 ಅಂಕದೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2005 ರ ಜನವರಿಯಿಂದ 2008 ರ ಜುಲೈ 1 ರೊಳಗೆ ಜನಿಸಿದವರು ಅರ್ಹರಿದ್ದು ಜನವರಿ 27 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಮಾಹಿತಿಗಾಗಿ http://agnipathvayu.cdac.in ಹಾಗೂ http://agnipathvayu.cdac.in ವೆಬ್ ಸೈಟ್ ಗೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ. ದೂ.ಸಂ: 08192-259446 ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.