ನವದೆಹಲಿ: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ(ಡಿಪಿಪಿಡಬ್ಲ್ಯು) ಮಾರ್ಚ್ 17 ರಂದು ರಾಷ್ಟ್ರವ್ಯಾಪಿ ಪಿಂಚಣಿ ಅದಾಲತ್ ನಡೆಸಲಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಂಚಣಿದಾರರ ಕಲ್ಯಾಣ ಇಲಾಖೆ ದೇಶವ್ಯಾಪಿ ಪಿಂಚಣಿ ಅದಾಲತ್ ನಡೆಸಲಿದ್ದು, ಅಸ್ತಿತ್ವದಲ್ಲಿರುವ ನೀತಿ ಮಾರ್ಗಸೂಚಿಗಳ ಚೌಕಟ್ಟಿನೊಳಗೆ ಪಿಂಚಣಿದಾರರ ಕುಂದುಕೊರತೆಗಳನ್ನು ಪರಿಹರಿಸುವುದು ಅದಾಲತ್ ಉದ್ದೇಶವಾಗಿದೆ.
ಇಲಾಖೆಯು ಬಾಕಿ ಉಳಿದಿರುವ ಪಿಂಚಣಿ ಪ್ರಕರಣಗಳು ಮತ್ತು ನಂತರದ ಕುಂದುಕೊರತೆಗಳನ್ನು ಸಂಬಂಧಪಟ್ಟ ಕಚೇರಿಗಳಿಂದ ಇತ್ಯರ್ಥಪಡಿಸುವ ಅಗತ್ಯತೆಗಳ ಮೇಲೆ ಒತ್ತು ನೀಡಿದೆ, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರ ಪಿಂಚಣಿ ಪ್ರಕರಣಗಳು ಮತ್ತು ಕುಟುಂಬ ಪಿಂಚಣಿ ಪ್ರಕರಣಗಳು ಪ್ರಮುಖವಾಗಿವೆ ಎನ್ನಲಾಗಿದೆ.