ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಡೆಂಘಿ ಪ್ರಕರಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸುಮಾರು 10,500ಕ್ಕೂ ಹೆಚ್ಚು ಡೆಂಘಿ ಕೇಸ್‍ಗಳು ದಾಖಲಾಗಿವೆ. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ದೃಢ ಪಟ್ಟಿದ್ದು, ಬೆಂಗಳೂರು ಒಂದರಲ್ಲೇ 5,756 ಕ್ಕೂ ಹೆಚ್ಚು ಡೆಂಗ್ಯೂ ಕೇಸ್‍ಗಳು ದಾಖಲಾಗಿವೆ.
ರಾಜ್ಯದಲ್ಲಿ ಡೆಂಘಿ ಶಂಕಿತರ ಸಂಖ್ಯೆ ಲಕ್ಷದ ಗಡಿದಾಟಿದೆ. ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ರಕ್ತದ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗಿದೆ. ಜ್ವರ ಬಂದ ತಕ್ಷಣ ಆಸ್ಪತ್ರೆಗೆ ಹೋಗಿ, ಯಾರೂ ನಿರ್ಲಕ್ಷ್ಯ ಮಾಡಬೇಡಿ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಮುನ್ನೆಚ್ಚರಿಕೆ ಕ್ರಮಗಳು
ಮನೆಯ ಸುತ್ತಮತ್ತು ನೀರು ನಿಲ್ಲದಂತೆ ನೋಡಿಕೊಳ್ಳಿ
ಮಕ್ಕಳಿಗೆ ಉದ್ದ ತೋಳಿನ ಉಲನ್ ಬಟ್ಟೆ ಹಾಕಿದ್ರೆ ಸೊಳ್ಳೆ ಕಚ್ಚುವುದಿಲ್ಲ
ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಿ
ಅಗತ್ಯವಿದ್ದಲ್ಲಿ ಸೊಳ್ಳೆ ಬತ್ತಿಗಳನ್ನು ಉರಿಸಿ
ಸಣ್ಣ ಪ್ರಮಾಣದ ಜ್ವರ, ತಲೆನೋವು, ಸುಸ್ತು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ