ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ ಅಂತ ನೋಡೋಣ ಬನ್ನಿ.
ಬೇಕಾಗುವ ಪದಾರ್ಥಗಳು
• ಕೊಬ್ಬರಿ ತುರಿ
• ಏಲಕ್ಕಿ ಪುಡಿ
• ತುಪ್ಪ- ಸ್ವಲ್ಪ
• ಅಕ್ಕಿ- ಅರ್ಧ ಬಟ್ಟಲು
• ಉದ್ದಿನ ಬೇಳೆ – 1/4 ಬಟ್ಟಲು
• ಬೆಲ್ಲ- 1 ಬಟ್ಟಲು
• ಕಡಲೆಬೇಳೆ -1 ಬಟ್ಟಲು
• ಎಣ್ಣೆ – ಕರಿಯಲು
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು ನಂತರ ನೆನೆಸಿದ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಸ್ವಲ್ಪ ಸಕ್ಕರೆ ಹಾಕಿ 8 ಗಂಟೆಗಳ ಕಾಲ ನೆನೆಯಲು ಬಿಡಬೇಕು, ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
ಬೆಂದ ಕಡಲೆಬೇಳೆಗೆ ಬೆಲ್ಲ, ಏಲಕ್ಕಿ ಪುಡಿ ಹಾಗೂ ತುಪ್ಪವನ್ನು ಹಾಕಿ ಊರ್ಣವನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದ ನಂತರ ಊರ್ಣವನ್ನು ಉಂಡೆಗಳನ್ನು ಮಾಡಿಟ್ಟುಕೊಂಡು ಈ ಹಿಂದೆಯೇ ರುಬ್ಬಿಕೊಂಡಿದ್ದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಸ್ವೀಟ್ ಬೋಂಡಾ ಸವಿಯಲು ಸಿದ್ದ.