Shocking News: ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ‘ಲಿವ್ ಇನ್ ರಿಲೇಷನ್’ ಗೆಳತಿಯ ಹತ್ಯೆ

ತನ್ನೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಗೆಳತಿಯನ್ನ ಕೊಂದ ಆರೋಪದ ಮೇಲೆ ದೆಹಲಿ ಪೊಲೀಸರು 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಉತ್ತರ ಪ್ರದೇಶದ ಬಾಗ್ಪತ್ ನಿವಾಸಿ ವಿನೀತ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೃತ ಯುವತಿಯನ್ನು ಉತ್ತರಾಖಂಡದ ಮೀರಜ್‌ಪುರ ನಿವಾಸಿ ರೋಹಿನಾ ನಾಜ್ ಅಲಿಯಾಸ್ ಮಹಿ (25) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನನ್ನು ಮದುವೆಯಾಗುವಂತೆ ವಿನೀತ್ ಪನ್ವಾರ್ ಮೇಲೆ ರೋಹಿನಾ ಒತ್ತಡ ಹೇರುತ್ತಿದ್ದಳು. ಈ ಕಾರಣಕ್ಕಾಗಿ ಆರೋಪಿ ಆಕೆಯನ್ನು ಹತ್ಯೆ ಮಾಡಿರೋದಾಗಿ ಗೊತ್ತಾಗಿದೆ. ಪೊಲೀಸರಿಗೆ ಬಂದ ಮಾಹಿತಿಯ ಪ್ರಕಾರ, ಏಪ್ರಿಲ್ 12 ರಂದು ಕರವಾಲ್ ನಗರದ ಕೃಷ್ಣ ಪಬ್ಲಿಕ್ ಸ್ಕೂಲ್ ಬಳಿ ರೋಹಿನಾ ನಾಜ್ ಶವ ಬಿದ್ದಿತ್ತು.

ರೋಹಿನಾಳ ಲಿವ್ ಇನ್ ರಿಲೇಷನ್ ಶಿಪ್ ಗೆಳೆಯ ವಿನೀತ್ ಪನ್ವಾರ್, ಆತನ ಸಹೋದರ ಮೋಹಿತ್ ಮತ್ತು ಸಹೋದರಿ ಪಾರುಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಶಂಕಿತರು ಎಂದು ಪೊಲೀಸರು ಗುರುತಿಸಿದ್ದರು.

ಪನ್ವಾರ್ ಮತ್ತು ಪಾರುಲ್ ತಮ್ಮ ಸ್ನೇಹಿತ ಇರ್ಫಾನ್ ಜೊತೆಗೆ ಫರ್ಷ್ ಬಜಾರ್‌ನಲ್ಲಿ ರೋಹಿನಾ ನಾಜ್‌ನನ್ನು ಕೊಂದು ಕರವಾಲ್ ನಗರದಲ್ಲಿ ಶವವನ್ನು ಎಸೆದಿದ್ದರು. ತನಿಖೆ ವೇಳೆ ಪಾರುಲ್, ಮೋಹಿತ್ ಮತ್ತು ಇರ್ಫಾನ್ ನನ್ನು ಬಂಧಿಸಿದ್ದರೆ ವಿನೀತ್ ಪನ್ವಾರ್ ಪರಾರಿಯಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಲೋನಿಯ ಬಳಿ ಇದ್ದ ಪನ್ವಾರ್ ಬಗ್ಗೆ ಸಿಕ್ಕ ನಿರ್ದಿಷ್ಟ ಮಾಹಿತಿಗಳ ಆಧಾರದ ಮೇಲೆ ದೆಹಲಿ ಪೊಲೀಸ್ ಅಪರಾಧ ವಿಭಾಗದ ತಂಡವು ಲೋನಿಗೆ ಧಾವಿಸಿ ಆತನನ್ನು ಬಂಧಿಸಿದೆ. 2017 ರಲ್ಲಿ ರೋಹಿನಾ ನಾಜ್ ಳನ್ನು ಭೇಟಿಯಾಗಿದ್ದ ಪನ್ವಾರ್ ಅವಳೊಂದಿಗೆ ವಾಸಿಸ್ತಿದ್ದ. ನಂತರ ಬಾಗ್‌ಪತ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅವನನ್ನು ಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ನಂತರ ರೋಹಿನಾ ನಾಜ್, ಪನ್ವಾರ್‌ನ ಸಹೋದರಿ ಪಾರುಲ್‌ನೊಂದಿಗೆ ಫರ್ಶ್ ಬಜಾರ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಳು ಎಂದು ಅಧಿಕಾರಿ ಹೇಳಿದರು.

2022 ರಲ್ಲಿ ಪನ್ವಾರ್ ನನ್ನು ಪೆರೋಲ್‌ನಲ್ಲಿ ಬಿಡುಗಡೆ ಮಾಡಿದ ನಂತರ ಗಾಜಿಯಾಬಾದ್‌ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದನು. ಈ ವೇಳೆ ರೋಹಿನಾ ನಾಜ್ ತನ್ನನ್ನು ಮದುವೆಯಾಗುವಂತೆ ಪನ್ವಾರ್ ಮೇಲೆ ಒತ್ತಡ ಹೇರುತ್ತಿದ್ದಳು.

ಇದಕ್ಕೆ ಬೇಸತ್ತ ಆತ ತನ್ನ ಸಹೋದರ ಮೋಹಿತ್ ಮತ್ತು ಸಹೋದರಿ ಪಾರುಲ್ ಜೊತೆ ಸೇರಿ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದನು. ಫರ್ಷ್ ಬಜಾರ್‌ನ ತೆಲಿವಾರದಲ್ಲಿ ರೋಹಿನಾ ನಾಜ್‌ನನ್ನು ಕೊಂದ ನಂತರ, ಅವನು ಮತ್ತು ಪಾರುಲ್‌ನ ಸ್ನೇಹಿತ ಆಕೆಯ ಶವವನ್ನು ಕರವಾಲ್ ನಗರದ ಶಿವ ವಿಹಾರ್‌ನಲ್ಲಿ ಎಸೆದರು ಎಂದು ಅಧಿಕಾರಿ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read