
ಸಲಿಂಗಕಾಮ ವಿವಾಹಗಳನ್ನು ಅಂಗೀಕರಿಸುವ ಮೂಲಕ ತಾರತಮ್ಯದಿಂದ ನಮ್ಮನ್ನು ರಕ್ಷಿಸಬೇಕೆಂದು ಸಲಿಂಗಿ ದಂಪತಿ ಹೇಳಿದ್ದಾರೆ. ಈ ದಂಪತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವ್ಯಾಪಕ ಮೆಚ್ಚುಗೆ ಗಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ನಮಗೆ ನಿನ್ನೆ ನೋವಾಗಿತ್ತು. ಇಂದು ನಾನು ಹಾಗೂ ಉತ್ಕಾಶ್ ಸಕ್ಸೆನಾ ನ್ಯಾಯಾಲಯದ ಎದುರು ಉಂಗುರಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಮತ್ತೊಮ್ಮೆ ನಾವು ಈ ಹೋರಾಟ ನಡೆಸುತ್ತೆವೆ ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿ ಅನನ್ಯ ಕೋಟ್ಯಾ ಬರೆದುಕೊಂಡಿದ್ದಾರೆ.
ಕೋಟ್ಯಾ ಸಂಗಾತಿ ಉತ್ಕಾಶ್ ಸಕ್ಸೆನಾ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿದ್ದಾರೆ, ಹಾಗೂ ಅಭಿವೃದ್ಧಿ ಅರ್ಥಶಾಸ್ತ್ರಜ್ಞರು ಕೂಡ ಹೌದು. ಅಲ್ಲದೇ ಭಾರತದಲ್ಲಿ ಸಲಿಂಗಕಾಮಿ ವಿವಾಹಕ್ಕೆ ಮಾನ್ಯತೆ ನೀಡಬೇಕೆಂದು ಅರ್ಜಿ ಸಲ್ಲಿಕೆ ಮಾಡಿದವರೂ ಆಗಿದ್ದಾರೆ.
ಕೋಟ್ಯಾ ಅವರ ಪಾಲುದಾರ ಉತ್ಕಾಶ್ ಸಕ್ಸೇನಾ ಅವರು ಸುಪ್ರೀಂ ಕೋರ್ಟ್ ವಕೀಲರು, ಅಭಿವೃದ್ಧಿ ಅರ್ಥಶಾಸ್ತ್ರಜ್ಞರು ಮತ್ತು ಭಾರತದಲ್ಲಿ ಸಲಿಂಗ ವಿವಾಹದ ಹಕ್ಕಿಗಾಗಿ ಅರ್ಜಿದಾರರಾಗಿದ್ದಾರೆ.