BREAKING: ದೆಹಲಿ ಚುನಾವಣೆ ಹೊತ್ತಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್: 5 ಶಾಸಕರು ರಾಜೀನಾಮೆ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಆಮ್ ಆದ್ಮಿ ಪಕ್ಷಕ್ಕೆ(ಎಎಪಿ) ಗಮನಾರ್ಹ ಹಿನ್ನಡೆಯಾಗಿದ್ದು, ಮೆಹ್ರೌಲಿಯ ನರೇಶ್ ಯಾದವ್ ಸೇರಿದಂತೆ ಐದು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ ಶಾಸಕರಲ್ಲಿ ಪಾಲಂನ ಭಾವನಾ ಗೌರ್, ಮೆಹ್ರೌಲಿಯ ನರೇಶ್ ಯಾದವ್, ಜನಕ್‌ಪುರಿಯ ರಾಜೇಶ್ ರಿಷಿ, ಕಸ್ತೂರ್ಬಾ ನಗರದ ಮದನ್ ಲಾಲ್, ತ್ರಿಲೋಕಪುರಿಯ ರೋಹಿತ್ ಮೆಹ್ರೌಲಿಯಾ, ಬಿಜ್ವಾಸನ್‌ನಿಂದ ಬಿಎಸ್ ಜೂನ್ ಮತ್ತು ಆದರ್ಶ ನಗರದ ಪವನ್ ಶರ್ಮಾ ಸೇರಿದ್ದಾರೆ.

ಪಾಲಂ ಶಾಸಕಿ ಭಾವನಾ ಗೌರ್, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ, ತಮ್ಮ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ಪಕ್ಷ ತ್ಯಜಿಸುತ್ತಿರುವುದಾಗಿ ತಿಳಿಸಿದ್ದಾರೆ.

ಆಪ್ ನಾಯಕಿ ಮತ್ತು ಮೆಹ್ರೌಲಿ ಶಾಸಕ ನರೇಶ್ ಯಾದವ್ ಪಕ್ಷ ತೊರೆದರು. 2025 ರ ಚುನಾವಣೆಯಲ್ಲಿ ಯಾದವ್‌ಗೆ ಟಿಕೆಟ್ ನಿರಾಕರಿಸಲಾಯಿತು. ಈ ಎಲ್ಲಾ ಶಾಸಕರು 2025 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆಯದವರಾಗಿದ್ದಾರೆ. ಏಕೆಂದರೆ ಎಎಪಿ ಇವರ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಯ್ಕೆ ಮಾಡಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read