ಬೆಂಗಳೂರು: ಇನ್ಮುಂದೆ ಸರ್ಕಾರದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಬಣ್ಣ ಬಳಕೆಗೆ ನಿರ್ಧರಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
KSDL(ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ) ಕಾರ್ಖಾನೆಗೆ ಮರು ಹುಟ್ಟು ನೀಡಿ ಲಾಭದತ್ತ ಮುನ್ನಡೆಸಿದಂತೆಯೇ ಇದೀಗ ಸರ್ಕಾರಿ ಸ್ವಾಮ್ಯದ ಮೈಸೂರು ಪೈಂಟ್ಸ್ & ವಾರ್ನಿಶ್ ಲಿಮಿಟೆಡ್ ಸಂಸ್ಥೆಗೂ ಕಾಯಕಲ್ಪ ನೀಡಲಿದ್ದೇವೆ
ಇನ್ಮುಂದೆ ಸರ್ಕಾರದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಬಣ್ಣ ಬಳಕೆಗೆ ನಿರ್ಧರಿಸಲಾಗಿದೆ. ಇದಲ್ಲದೇ ಇನ್ನೂ ಹೆಚ್ಚಿನ ಪುನಶ್ಚೇತನ ಕ್ರಮಗಳ ಮೂಲಕ 2024-25ನೇ ಸಾಲಿನಲ್ಲಿ 500 ಕೋಟಿ ರೂಪಾಯಿ ಲಾಭ ಗಳಿಕೆಯ ಗುರಿ ಹೊಂದಲಾಗಿದೆ. ಈ ಮೂಲಕ ನಾಲ್ವಡಿ ಕೃಷ್ಣರಾಜ ಒಡಯರ್ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದೇವೆ ಎಂದು ತಿಳಿಸಿದ್ದಾರೆ.