ದೆಹಲಿಯ ತೇಲಿಬಂದ ಜಿಇ ರಸ್ತೆಯಲ್ಲಿ ಆಗಸ್ಟ್ 2ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ 21 ವರ್ಷದ ಶ್ರೇಷ್ಠಾ ಸಾವನ್ನಪ್ಪಿದ್ದಾಳೆ. ನಡೆದುಕೊಂಡು ಹೋಗ್ತಿದ್ದ ಶ್ರೇಷ್ಠಾಗೆ ಕಾರು ಗುದ್ದಿದೆ. ಕಾರು ಚಲಾಯಿಸ್ತಿದ್ದ ಶಿಖಾ ಅಗರ್ವಾಲ್ ಬಂಧನವಾದ ಅರ್ಧ ಗಂಟೆಯೊಳಗೆ ಜಾಮೀನು ಸಿಕ್ಕಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೇಷ್ಠಾ ತಂದೆ, ಎಸ್‌ಬಿಐನಲ್ಲಿ ಎಜಿಎಂ ಆಗಿರುವ ಆಭಾಸ್ ಸತ್ಪತಿ, ಆರೋಪಿಗೆ ಅರ್ಧ ಗಂಟೆಯಲ್ಲೇ ಜಾಮೀನು ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ನ್ಯಾಯದ ಅಪಹಾಸ್ಯ. ನನ್ನ ಮಗಳನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇವೆ. ಆದ್ರೆ ಅವಳ ಸಾವಿಗೆ ಕಾರಣರಾದವರಿಗೆ ಅರ್ಧ ಗಂಟೆಯೊಳಗೆ ಜಾಮೀನು ಸಿಕ್ಕಿದೆ ಎಂದು ದುಃಖ ತೋಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಸಚಿವ ಕೇದಾರ್ ಕಶ್ಯಪ್ ಅವರ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ತೀರ್ಥರಾಜ್ ಅಗರ್ವಾಲ್ ಅವರ ಪತ್ನಿ ಶಿಖಾ ಅಗರ್ವಾಲ್ ಈ ಅಪಘಾತ ಮಾಡಿದ್ದಾರೆ. ಅವರು ಅಪಘಾತದ ದಿನ ರಾಂಗ್ ಸೈಡ್‌ನಲ್ಲಿ ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದರು. ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದ ಶ್ರೇಷ್ಠಾಗೆ ಡಿಕ್ಕಿ ಹೊಡೆದಿದ್ದಾರೆ. ಗಾಯಗೊಂಡ ಶ್ರೇಷ್ಠಾಗೆ ಸಹಾಯ ಮಾಡುವ ಬದಲು ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದರು.