
ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದುಷ್ಕರ್ಮಿಗಳು ಏಕನಾಥ್ ಶಿಂಧೆ ಅವರ ಕಾರಿನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗೇಶ್ ಅಚ್ಯುತ್ ರಾವ್, ಅಭಯ್ ಗಜಾನನ ಶಿಂಗಾನೆ ಬಂಧಿತ ಆರೋಪಿಗಳು. ಬಂಧಿತರು ದಿಯುಲ್ಗಾಂವ್ ಮಾಹಿ ಬುಲ್ದಾನ ನಿವಾಸಿಗಳು. ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮುಂಬೈಗೆ ಕರೆ ತರುತ್ತಿದ್ದಾರೆ.