ರಾಮನಗರ: ಆಗಸ್ಟ್ 14 ರಿಂದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಯೋಜನೆ ಜಾರಿಗೊಳಿಸಲಾಗುವುದು ಎಂದು ರಾಗವಾಗಿ ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಡು ಹೇಳಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತೇವೆ. ಆಗಸ್ಟ್ 14 ರಂದು ಹಣ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇಲ್ಲದಿದ್ದರೆ ನಮ್ಮ ಜನಪ್ರತಿನಿಧಿಗಳು ಬಂದು ಆಧಾರ್ ಲಿಂಕ್ ಮಾಡುತ್ತಾರೆ. ಗಂಡಸರಿಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಲು ಹೋಗಬೇಡಿ. ಅವರೆಲ್ಲ ವೈನ್ ಶಾಪ್ ಗಳಿಗೆ ಹೋಗಿ ಬಿಡುತ್ತಾರೆ. 5 ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಇದು ಕುಮಾರಣ್ಣ ನೀಡಿದ್ರಾ? ಕುಮಾರಸ್ವಾಮಿಯ ಪ್ರಶ್ನೆ ಮಾಡಿದ್ರು ಅಂತಾ ಬೇಜಾರಿಲ್ಲ. ನಾವು ನೀಡಿರುವ ಎಲ್ಲಾ ಭರವಸೆ ಈಡೇರಿಸುತ್ತೇವೆ. ಇಲ್ಲದಿದ್ದರೆ ನಾನು ಸಂಸದ ಡಿ.ಕೆ. ಸುರೇಶ್ ಪರವಾಗಿ ಮತ ಕೇಳುವುದಿಲ್ಲ ಎಂದು ಹೇಳಿದ್ದಾರೆ.
2000 ರೂ., ಉಚಿತ ಕರೆಂಟ್ ಗೆ ಯಾರೂ ಲಂಚ ನೀಡಬೇಕಿಲ್ಲ. ಜುಲೈನಿಂದ ಯಾರೂ ಕರೆಂಟ್ ಬಿಲ್ ಪಾವತಿಸುವಂತಿಲ್ಲ. ಮೂರು ತಿಂಗಳಲ್ಲಿ ಬೇರೆ ಕಡೆಯಿಂದ ಅಕ್ಕಿ ತಂದು ತಲುಪಿಸುವ ಕೆಲಸ ಮಾಡುತ್ತೇವೆ. ವಿಶ್ವಾಸ ಇದೆ ತಾನೇ ಎಂದು ಪ್ರಶ್ನಿಸಿದ್ದಾರೆ.
ಆಗಸ್ಟ್ 14 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗುವುದು. ಹಣ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು. ಗ್ಯಾರಂಟಿ ಬಗ್ಗೆ ಜಾರಿ ನೀಡಿದ್ದೆವು. ಆ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.