
ಜೈಪುರ್ ನಲ್ಲಿದ್ದ ಕಬಡ್ಡಿ ಪಂದ್ಯಗಳು ಮುಕ್ತಾಯವಾಗಲಿದ್ದು, ಇಂದು ಮೊದಲ ಪಂದ್ಯದಲ್ಲೇ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ದಬಾಂಗ್ ಡೆಲ್ಲಿ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ.
ಕಳೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ದಬಾಂಗ್ ಡೆಲ್ಲಿ ಭರ್ಜರಿ ಜಯ ಸಾಧಿಸಿತ್ತು. ಇದೀಗ ಫಾಜೆಲ್ ಸುಲ್ತಾನ್ ಅತ್ರಾಚಲಿ ನೇತೃತ್ವದ ಗುಜರಾತ್ ಜೈಂಟ್ಸ್ ಈ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.
ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಸೆಣಸಾಡಲಿವೆ. ತಮ್ಮ ಹೋಂ ಗ್ರೌಂಡ್ ನಲ್ಲಿ ಸೋಲೆ ಕಾಣದ ಜೈಪುರ್ ಪಿಂಕ್ ಪ್ಯಾಂಥರ್ಸ್ ಕೊನೆಯ ಪಂದ್ಯದಲ್ಲಿ ಜಯ ಸಾಧಿಸುತ್ತಾ ಕಾದುನೋಡಬೇಕಾಗಿದೆ.