
ಬೆಂಗಳೂರು: ನಮ್ಮಣ್ಣ ಸಿಎಂ ಆಗಬೇಕು ಎಂಬ ಆಸೆ, ಕನಸು ನನಗೂ ಇದೆ. ಆದರೆ ಕಾಲಬರಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಅಣ್ಣ ಸಿಎಂ ಆಗಬೇಕು ಎಂಬ ಕನಸು ನನಗೂ ಇದೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ. ಸದ್ಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಸೀಟ್ ಖಾಲಿ ಇದ್ದಾಗ ಮಾತ್ರ ಪ್ರಯತ್ನ ಮಾಡ್ಬೇಕು. ಬಲವಂತವಾಗಿ ಎಳೆದು ಸೀಟ್ ಮೇಲೆ ಕೂರಿಸಲು ಆಗಲ್ಲ ಎಂದರು.
ನನಗೂ ಒಂದು ಆಸೆ ಇದೆ. ಅಣ್ಣ ಸಿಎಂ ಆಗಬೇಕು. ಆದರೆ ಎಲ್ಲದಕ್ಕೂ ಕಾಲಬರಬೇಕು, ಬರುತ್ತೆ. ನಮಗೆ ನಂಬಿಕೆ ಇದೆ. ನಂಬಿಕೆ ಮೇಲೆ ಜೀವನವಿದೆ ಎಂದು ತಿಳಿಸಿದ್ದಾರೆ.