ಬೆಂಗಳೂರು: ನೀರಿನ ದರ ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಯಾರು ಏನೇ ಹೇಳಿದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜನ ಬೈದರೂ ಪರವಾಗಿಲ್ಲ. ಮೀಡಾದವರು, ವಿಪಕ್ಷಗಳು ಹೇಳಿದರೂ ಚಿಂತೆಯಿಲ್ಲ. ನೀರಿನ ದರ ಹೆಚ್ಚಳ ಮಾಡುತ್ತೇವೆ. ನೀರಿನ ದರ 8-9 ವರ್ಷಗಳಿಮ್ದ ಹೆಚ್ಚಳವಾಗಿಲ್ಲ. ಜಲಮಂಡಳಿ ನಷ್ಟದಲ್ಲಿದೆ. ಸಂಬಳ ಕೊಡೋಕೆ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರ ಕೂಡ ಪಾವತಿಸಲಾಗುತ್ತಿಲ್ಲ. ಹೀಗಾಗಿ ನೀರಿನ ದರ ಏರಿಕೆ ಅನಿವಾರ್ಯ ಎಂದರು.
ನಾಗರಿಕರಿಗೆ ಎಷ್ಟೇ ಮಾಡಿದರೂ ಉಪಕಾರದ ಸ್ಮರಣೆಯಿಲ್ಲ. ಎಷ್ಟೇ ಮಾಡಿದರೂ ಬೈತಾರೆ, ಕಮೆಂಟ್ ಮಾಡ್ತಾರೆ. ದುಡ್ಡು ಕಟ್ಟುವವರು ಕಟ್ಟುತ್ತಾರೆ, ಕೆಲವರು ಕಟ್ಟಲ್ಲ. BWSSB ಅಧಿಕಾರಿಗಳು ನೀರಿನ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಲಿ, ಈ ಬಗ್ಗೆ ಚರ್ಚೆ ನಡೆಸಿ ಶೀಘ್ರದಲ್ಲಿಯೇ ನೀರಿನ ದರ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.