
ಹಾಸನ: ಡಿಸಿಎಂ ಡಿ.ಕೆ.ಶಿವಕುಮಾರ್ ಮಹಾಶಿವರಾತ್ರಿಯಂದು ಸದ್ಗುರು ಜಗ್ಗಿ ವಾಸುದೇವ್ ಅವರು ಕೊಯಮತ್ತೂರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಸಿದ್ದಕ್ಕೆ ಕಾಂಗ್ರೆಸ್ ನ ಕೆಲ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ಸಚಿವ ಕೆ.ಎನ್.ರಾಜಣ್ಣ, ಡಿ.ಕೆ.ಶಿವಕುಮಾರ್ ನಡೆ ಎಷ್ಟು ಸರಿ? ಎಂದು ಪ್ರಶ್ಮಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿದ್ದು ಎಷ್ಟು ಸರಿ? ಡಿ.ಕೆ.ಶಿವಕುಮಾರ್ ಅವರ ನಡೆ ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ? ಅವರೇ ಹೇಳಬೇಕು ಎಂದರು.
ಈ ಹಿಂದೆ ಸದ್ಗುರು, ರಾಹುಲ್ ಗಾಂಧಿ ಯಾರು? ಅವರು ಗೊತ್ತೇ ಇಲ್ಲ ಎಂದಿದ್ದರು. ಅಂತವರ ಜೊತೆ ವೇದಿಕೆ ಕಾರ್ಯಕ್ರಮ ಹಂಚಿಕೊಳ್ತಾರೆ ಅಂದ್ರೆ ಇದರ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಉತ್ತರ ಕೊಡಬೇಕು ಎಂದು ಹೇಳಿದರು.