ಬೆಂಗಳೂರು: ಡಿ.ಕೆ.ಶಿವಕುಮಾರ್ 100 ಕೋಟಿ ಆಫರ್ ನೀಡಿದ್ದರು ಎಂಬ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಕ್ಕೆ ಕಿಡಿಕಾರಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ದೇವರಾಜೇಗೌಡಗೆ ತಲೆಕೆಟ್ಟಿದೆ ಆಸ್ಪತ್ರೆಗೆ ಸೇರಿಸಬೇಕು ಎಂದು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ದೇವರಾಜೇಗೌಡ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ತಲೆಕೆಡಿಸಿಕೊಳ್ಳಲ್ಲ ಎಂದರು.
ಅನಗತ್ಯವಾಗಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ತಿದ್ದಾರೆ. ದೇವರಾಜೇಗೌಡ ಏನುಬೇಕಾದರೂ ಮಾತನಾಡಿಕೊಳ್ಳಲಿ. ತಲೆಕೆಟ್ಟವನು ಆತನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಪಕ್ಷ ಎಂದ ಮೇಲೆ ಸಾವಿರಾರು ಜನರು ಭೇಟಿಯಾಗುತ್ತಾರೆ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೆ ಗೊತ್ತು? ಆರೋಪ ಮಾಡಬೇಕು ಮಾಡುತ್ತಾರೆ ಎಂದು ಹೇಳಿದರು.