ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ನೋವಾಗುತ್ತಿದೆಯೇ. ಮದುವೆ ಮನೆಯಲ್ಲಿ ತಿಂದ ಬಗೆ ಬಗೆ ಖಾದ್ಯಗಳು ಹೊಟ್ಟೆಯಲ್ಲಿ ಹಾಗೆ ಕುಳಿತು ತಾಳ ಹಾಕುತ್ತಿವೆಯೇ. ಇಲ್ಲಿದೆ ನಿಮ್ಮಸಮಸ್ಯೆಗೆ ಸರಳ ಪರಿಹಾರ.
ಇವೆಲ್ಲಾ ಅಸಿಡಿಟಿ ಅಥವಾ ಅಜೀರ್ಣ ಸಮಸ್ಯೆಯ ಲಕ್ಷಣಗಳು. ಇದಕ್ಕೆ ಅತ್ಯುತ್ತಮ ಪರಿಹಾರ ಎಂದರೆ ಜೀರಿಗೆ ನೀರು. ಇದರ ತಯಾರಿಯೂ ಬಲು ಸುಲಭ. ಪುದೀನಾ ಎಲೆಗಳನ್ನು ಜಜ್ಜಿ. ಜೀರಿಗೆ ಪರಿಮಳ ಬರುವಷ್ಟು ಹುರಿಯಿರಿ ಅದಕ್ಕೆ ನೀರು ಸೇರಿಸಿ ಕುದಿಯಲು ಇಡಿ.
ಹತ್ತು ನಿಮಿಷ ಕುದಿಯಲಿ. ಬಳಿಕ ಜಜ್ಜಿಟ್ಟ ಪುದಿನ ಎಲೆಗಳನ್ನು ಸೇರಿಸಿ. ಅರ್ಧ ಲಿಂಬೆ ಹಿಂಡಿ. ಸಕ್ಕರೆ ಅಥವಾ ಜೇನು ಬೆರೆಸಿ. ಕೆಳಗಿಳಿಸಿ.
ಪೂರ್ತಿ ತಣ್ಣಗಾದ ಬಳಿಕ ಕುಡಿಯಿರಿ. ಇಷ್ಟವಿದ್ದರೆ ಸೋಡಾ ಬಳಸಿಯೂ ಕುಡಿಯಬಹುದು. ಇದರಿಂದ ಅಜೀರ್ಣ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ. ಬೆಳಗೆದ್ದು ಇದನ್ನು ಕುಡಿಯಬಹುದು. ಇಲ್ಲವೇ ಊಟದ ಬಳಿಕವೂ ಸೇವಿಸಬಹುದು. ಇದು ಜೀರ್ಣ ಕ್ರಿಯೆಗೆ ವೇಗ ಕೊಡುತ್ತದೆ ಮತ್ತು ಅನಗತ್ಯ ಅಂಶಗಳನ್ನು ದೇಹದಿಂದ ಹೊರ ಹಾಕುತ್ತದೆ.